HomeLive Newsಮಹಿಳಾ ಟಿ20 ಏಷ್ಯಾ ಕಪ್; ನಾಳೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ

ಮಹಿಳಾ ಟಿ20 ಏಷ್ಯಾ ಕಪ್; ನಾಳೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ

ನಾಳೆಯಿಂದ ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ಆರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ  ಡಾಂಬುಲ್ಲಾದಲ್ಲಿ ಬಹುತೇಕ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ uae ಹಾಗೂ ನೇಪಾಳ ಮುಖಾಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಕಾದಾಟ ನಡೆಸಲು ಸಜ್ಜಾಗಿವೆ.

ಪುರುಷರ ಕ್ರಿಕೆಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯವೆಂದರೆ ವೀಕ್ಷಣೆಯಲ್ಲಿ ದೊಡ್ಡ ದಾಖಲೆ ಬರೆಯುವುದು ಸಹಜವಾಗಿದೆ. ಅದೇ ರೀತಿ ನಾಳೆ ಮಹಿಳಾ ಕ್ರಿಕೆಟ್ ನಲ್ಲಿ ಇದೊಂದು ಹೊಸ ದಾಖಲೆಯಾಗುವ ಸಾಧ್ಯತೆ ಇದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯರಾದ ಸ್ಮೃತಿ ಮಂದಾನ, ದೀಪ್ತಿ ಶರ್ಮಾ ಹಾಗೂ ಹರ್ಮನ್‌ಪ್ರೀತ್ ಕೌರ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ. ಕಾದು ನೋಡಬೇಕಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular