HomeCrimeವಾಕ್ ಮಾಡುತ್ತಿದ್ದ ಮಹಿಳೆ ಚಿನ್ನದ ಸರ ಕದಿಯಲು ಯತ್ನ; ಪ್ರತಿರೋಧ ತೋರಿದ್ದಕ್ಕೆ ಚಾಕು ಇರಿತ

ವಾಕ್ ಮಾಡುತ್ತಿದ್ದ ಮಹಿಳೆ ಚಿನ್ನದ ಸರ ಕದಿಯಲು ಯತ್ನ; ಪ್ರತಿರೋಧ ತೋರಿದ್ದಕ್ಕೆ ಚಾಕು ಇರಿತ

ಮಧ್ಯಪ್ರದೇಶದ ಇಂದೋರ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಸ್ನೇಹಿತೆಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆ ಕತ್ತಿನಿಂದ ಚಿನ್ನದ ಸರ ಹಾಗೂ ಮಂಗಳಸೂತ್ರ ಕದಿಯಲು ಮೂವರು ಖದೀಮರು ಪ್ರಯತ್ನಿಸಿದ್ದು, ಪ್ರತಿರೋಧ ತೋರಿದ ವೇಳೆ ಚಾಕುವಿನಿಂದ ಇರಿದಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಪೂರ್ಣಿಮಾ ಎಂಬವರು ತಮ್ಮ ಸ್ನೇಹಿತೆ ಜೊತೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ಮೂವರು ಚಿನ್ನದ ಸರ ಹಾಗೂ ಮಂಗಳಸೂತ್ರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ವಿರೋಧ ತೋರಿದ ವೇಳೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನ್ನಪೂರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಪಡೆದುಕೊಂಡಿದ್ದ ಪೊಲೀಸರು ಈಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಲಾಗಿದ್ದು, ಇವರುಗಳು ಈ ಹಿಂದೆಯೂ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular