‌ʼದಮ್ ದಮ್ʼ ಹಾಡಿಗೆ ಯುವತಿಯ ಸಖತ್ ಸ್ಟೆಪ್ಸ್; ವಿಡಿಯೋ ವೈರಲ್

ಬ್ಯಾಂಡ್ ಬಾಜಾ ಬಾರಾತ್ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಟಿ ಅನುಷ್ಕಾ ಶರ್ಮಾ, ನಟ ರಣವೀರ್ ಸಿಂಗ್ ಅವರ ಈ ಸಿನಿಮಾಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಚಿತ್ರದ ದಮ್ ದಮ್ ಹಾಡು ಹಲವರ ಹಾಟ್ ಫೇವರಿಟ್. ಇತ್ತೀಚೆಗೆ, ಜಾನ್ಹವಿ ಮೋಟ್ವಾನಿ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನಸೆಳೆದಿದ್ದಾರೆ.

ದಮ್ ದಮ್ ಮಸ್ತ್ ಹೈ ಎಂಬ ಶೀರ್ಷಿಕೆಯೊಂದಿಗೆ ಜಾನ್ಹವಿ ತನ್ನ ಅಭಿನಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀಲಿ ಕ್ರಾಪ್ ಟಾಪ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಅನ್ನು ಧರಿಸಿರುವ ಅವರು, ಅದ್ಭುತವಾಗಿ ಕುಣಿದಿದ್ದಾರೆ. ಈ ವಿಡಿಯೋ 2.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ವೈರಲ್ ಆಗಿದೆ.

ಜಾನ್ಹವಿ ಮೋಟ್ವಾನಿ ಅವರು ಕೆಲವು ವಾರಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅದ್ಭುತವಾಗಿ ಕುಣಿದಿದ್ದೀರಿ ಎಂದು ಬಳಕೆದಾರರು ಹಾಡಿ ಹೊಗಳಿದ್ದಾರೆ, ದಮ್ ದಮ್ ಗೆ ಅವರ ಅಭಿನಯದ ಹೊರತಾಗಿ, ಜಾನ್ಹವಿಯ ಅನುಯಾಯಿಗಳು ಅನೇಕ ಹಾಡುಗಳಿಗೆ ಅವರ ನೃತ್ಯವನ್ನು ನೋಡಿ ಆನಂದಿಸಿದ್ದಾರೆ.

2010 ರ ಬ್ಯಾಂಡ್ ಬಾಜಾ ಬಾರಾತ್ ಚಲನಚಿತ್ರದ ಈ ಹಾಡು, ಬೆನ್ನಿ ದಯಾಳ್ ಮತ್ತು ಹಿಮಾನಿ ಕಪೂರ್ ಅವರ ಸುಮಧುರ ಗಾಯನ ಮತ್ತು ಸಲೀಂ-ಸುಲೈಮಾನ್ ಸಂಯೋಜಿಸಿದ ಸಂಗೀತದಿಂದಾಗಿ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ.

https://youtu.be/XSMbAbHAbZE

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read