HomeIndiaVideo | ವ್ಯಕ್ತಿಯೊಬ್ಬರಿಂದ ಕನ್ನಡಕ ಕಿತ್ತುಕೊಂಡ ಕೋತಿ; ಹಿಂಪಡೆಯಲು ಯುವತಿಯಿಂದ ಸಖತ್‌ ಪ್ಲಾನ್

Video | ವ್ಯಕ್ತಿಯೊಬ್ಬರಿಂದ ಕನ್ನಡಕ ಕಿತ್ತುಕೊಂಡ ಕೋತಿ; ಹಿಂಪಡೆಯಲು ಯುವತಿಯಿಂದ ಸಖತ್‌ ಪ್ಲಾನ್

ಪ್ರಾಣಿಗಳು ಕೂಡ ಎಷ್ಟು ಬುದ್ಧಿವಂತರಾಗಿರುತ್ತವೆ ಎಂಬುದನ್ನು ತೋರಿಸುವ ವಿಡಿಯೋಗಳಿಂದ ಇಂಟರ್ನೆಟ್ ತುಂಬಿದೆ. ಅದರಲ್ಲೂ ಮಂಗನಿಂದ ಮಾನವ ಎಂಬ ಮಾತಿನಂತೆ ಕೋತಿಗಳು ಕೂಡ ಬುದ್ಧಿವಂತ ಜೀವಿಗಳೇ. ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮನ್ನು ನಗಿಸದೆ ಇರದು.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, ಕನ್ನಡಕವನ್ನು ಧರಿಸಿದ ವ್ಯಕ್ತಿಯೊಬ್ಬ ಮೆಟ್ಟಿಲುಗಳ ಮೇಲೆ ನಡೆಯುತ್ತಾ ಸಾಗುತ್ತಿದ್ದರು. ಈ ವೇಳೆ ಸಮೀಪದಲ್ಲಿ ಕಾಯುತ್ತಿದ್ದ ಕೋತಿ, ಕೂಡಲೇ ವ್ಯಕ್ತಿಯ ಕನ್ನಡಕವನ್ನು ಕಸಿದುಕೊಂಡು ಮೆಟ್ಟಿಲುಗಳ ಮೂಲೆಗೆ ಹೋಗಿ ಕುಳಿತುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಅದು ಕೂಡ ಕನ್ನಡಕವನ್ನು ಧರಿಸಲು ಮುಂದಾಗಿದೆ. ಈ ವೇಳೆ ಮಹಿಳೆಯೊಬ್ಬಳು ಕೋತಿಗೆ ಹಣ್ಣುಗಳನ್ನು ನೀಡುತ್ತಾಳೆ. ಕೂಡಲೇ ಹಣ್ಣು ಕಿತ್ತುಕೊಂಡ ಮಂಗ ಕನ್ನಡಕವನ್ನು ಕೈಬಿಡುತ್ತದೆ. ಕೂಡಲೇ ಮಹಿಳೆ ಕನ್ನಡಕವನ್ನು ತೆಗೆದುಕೊಂಡು ಅದನ್ನು ವ್ಯಕ್ತಿಗೆ ಹಿಂದಿರುಗಿಸುತ್ತಾರೆ.

ಸದ್ಯ, ಈ ಪೋಸ್ಟ್ ವೈರಲ್ ಆಗಿದ್ದು, ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ. ಅಲ್ಲದೆ ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮಹಿಳೆ ಎಷ್ಟು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದಳು ಎಂದು ಕೆಲವರು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಕೋತಿಯ ಬಗ್ಗೆ ಅನುಕಂಪ ತೋರಿದ್ರು.

For Latest News Updates, Join Our Whatsapp Community🚩
RELATED ARTICLES

Most Popular