HomeInternationalVideo | ಬಾಡಿ ಪೇಂಟ್ ಧರಿಸಿ ಜಿಮ್ ಗೆ ಬಂದ ಯುವತಿ; ನಿಮಗೆ ಬಟ್ಟೆ ಇಲ್ಲದಿದ್ದರೆ...

Video | ಬಾಡಿ ಪೇಂಟ್ ಧರಿಸಿ ಜಿಮ್ ಗೆ ಬಂದ ಯುವತಿ; ನಿಮಗೆ ಬಟ್ಟೆ ಇಲ್ಲದಿದ್ದರೆ ಇಲ್ಲಿಂದ ಹೊರಡಿ ಎಂದ ವ್ಯಕ್ತಿ

ಯುವತಿಯೊಬ್ಬಳು ಜಿಮ್‌ಗೆ ಬಾಡಿ ಪೇಂಟ್ ಧರಿಸಿ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವೈರಲ್ ವಿಡಿಯೋದಲ್ಲಿ ನಟಾಲಿ ರೆನಾಲ್ಡ್ಸ್ ಎಂಬ ಯುವತಿಯ ಬಾಡಿ ಪೇಂಟ್ ಬಗ್ಗೆ ಟೀಕಿಸುತ್ತಾ ಜಿಮ್ ನಲ್ಲಿ ವರ್ಕೌಟ್ ಮಾಡುವವನೊಬ್ಬ ಪ್ರಶ್ನಿಸಿದ್ದಾರೆ. ಯುವತಿಯ ಉಡುಪನ್ನ ಅನುಚಿತ ಎಂದು ಕರೆದಿರುವ ವ್ಯಕ್ತಿ ನಿಮಗೆ ಬಟ್ಟೆ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಬೇಕು ಮೇಡಮ್ ಎಂದು ಹೇಳುತ್ತಾರೆ. ಇದಕ್ಕೆ ನಟಾಲಿ ರೆನಾಲ್ಡ್ಸ್ ನಾನು ಬಟ್ಟೆ ಧರಿಸಿದ್ದೇನೆ ಎಂದು ವಾದಿಸುತ್ತಾಳೆ.

ಡಿಸೆಂಬರ್ 27 ರಂದು ಸೆರೆಯಾಗಿರುವ ಕ್ಲಿಪ್ ನಲ್ಲಿ ವ್ಯಕ್ತಿ ನಟಾಲಿಗೆ ನಾನು ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತೇನೆ, ನನಗೆ ಇಂತಹ ಸಾಮಾಜಿಕ ಪ್ರಯೋಗದ ಗಿಮಿಕ್ ಗಳ ಬಗ್ಗೆ ಸಾಕಷ್ಟು ತಿಳಿದಿದೆ ಎಂದು ರೇಗುತ್ತಾರೆ. ಜಿಮ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇದನ್ನೆಲ್ಲಾ ರೆಕಾರ್ಡ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ಹಲವರು ಯುವತಿಯನ್ನ ಟೀಕಿಸಿದ್ದಾರೆ. “ಇದು ನಿಜವಾಗಿದ್ದರೆ, ನಾನು ಅವಳನ್ನು ಜೈಲಿನಲ್ಲಿಡಲು ಬಯಸುತ್ತೇನೆ” ಎಂದು ಓರ್ವ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆ ವ್ಯಕ್ತಿ ಹೇಳಿದ್ದು 100% ಸರಿ ಇದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಆದರೆ ನಟಾಲಿ ರೆನಾಲ್ಡ್ಸ್ ತಾನು ಜಿಮ್ ಬ್ರಾ ಮತ್ತು ಸ್ನಾನದ ಸೂಟ್ ಬಾಟಮ್‌ಗಳನ್ನು ಧರಿಸಿರುವುದಾಗಿ ಹೇಳಿದ್ದಾರೆ. ಎಲ್ಲರೂ ನಾನು ಬೆತ್ತಲೆಯಾಗಿ ಇದ್ದೇನೆಂದು ಏಕೆ ವರ್ತಿಸುತ್ತಾರೆ, ಮಹಿಳೆಯರು ಜಿಮ್ ನಲ್ಲಿ ಧರಿಸುವಂತಹ ಪ್ಯಾಂಟನ್ನು ನಾನು ಧರಿಸಿದ್ದೇನೆ. ಇದು ಕೆಟ್ಟದ್ದೇನೂ ಅಲ್ಲ” ಎಂದು ಹೇಳಿದ್ದಾರೆ.

ಮತ್ತೆ ಆಕೆ ಮತ್ತೊಂದು ಯೂಟ್ಯೂಬ್ ವಿಡಿಯೋ ಹಂಚಿಕೊಂಡು ಇಲ್ಲಿ ಪುರುಷ ಯೂಟ್ಯೂಬರ್ ತನ್ನ ದೇಹಕ್ಕೆ ಬಣ್ಣ ಹಚ್ಚಿಕೊಂಡು ಈ ರೀತಿಯ ವಿಡಿಯೋ ಮಾಡಿದ್ದಾನೆ. ಆದರೆ ನಾನು ಬಣ್ಣ ಹಚ್ಚಿಕೊಂಡರೆ ಎಲ್ಲರೂ ಜಗತ್ತೇ ಕೊನೆಗೊಳ್ಳುತ್ತಿರುವಂತೆ ವರ್ತಿಸುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular