HomeIndiaಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ

ಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ

ವರನ ಅನ್ವೇಷಣೆಯಲ್ಲಿದ್ದ ಯುವತಿಯೊಬ್ಬಳು ಬೇರೆ ಬೇರೆ ಕಂಪನಿಗಳಲ್ಲಿ ಕೊಡುವ ವೇತನದ ವಿವರಗಳನ್ನು ತಿಳಿಯಲು ವಿವಾಹತಾಣಗಳನ್ನು ಶೋಧಿಸಿದ್ದಾಳೆ.

ಅಶ್ವೀನ್ ಬನ್ಸಾಲ್ ಶೇರ್‌ ಮಾಡಿದ ಲಿಂಕ್ಡಿನ್ ಪೋಸ್ಟ್ ಒಂದರಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲಾಗಿದೆ. ತನ್ನ ಸ್ನೇಹಿತೆಯೊಬ್ಬರು ಹೀಗೆ ವಿವಿಧ ಕಂಪನಿಗಳಲ್ಲಿನ ವೇತನದ ವಿವರಗಳ ಹೋಲಿಕೆ ಮಾಡಲು ಬಳಸಿದ ವಿವರಗಳನ್ನು ತಿಳಿಸಿದ್ದಾರೆ ಬನ್ಸಾಲ್.

“ತಾನು #jeevansathi.com ತಾಣಕ್ಕೆ ಭೇಟಿ ನೀಡುವ ಮೂಲಕ ವಿವಿಧ ಕಂಪನಿಗಳು ನೀಡುವ ವೇತನಗಳ ಬಗ್ಗೆ ಅರಿತು, ಆ ನಂತರ ಆ ಕಂಪನಿಗಳಿಗೆ ಅರ್ಜಿ ಹಾಕುವ ಕುರಿತು ಮಾತನಾಡಿದ್ದಾಳೆ,” ಎಂದು ಬನ್ಸಾಲ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್‌ಗೆ 33 ಸಾವಿರಕ್ಕೂ ಹೆಚ್ಚಿನ ಲೈಕ್ಸ‌ಗಳು ಸಿಕ್ಕಿದ್ದು, ಫೇಸ್ಬುಕ್‌ನಲ್ಲಿ ಶೇರ್‌ ಮಾಡಲಾಗಿದೆ. ಬಹಳಷ್ಟು ಮಂದಿ ಈ ಮಹಿಳೆಯ ಸ್ಮಾರ್ಟ್ ನಡೆ ಕುರಿತಂತೆ ಮೆಚ್ಚಿ ಮಾತನಾಡಿದರೆ ಅನೇಕ ಮಹಿಳೆಯರು ತಾವೂ ಸಹ ಇದೇ ಹಾದಿಯನ್ನು ಹಿಡಿಯುವುದಾಗಿ ತಿಳಿಸಿದ್ದಾರೆ.

“ಎಲ್ಲೆಲ್ಲೂ ಅನ್ವೇಷಣೆಗಳೇ ಆಗಿವೆ. ಹೀಗೂ ಆಗುತ್ತದೆಯೇ?” ಎಂದು ಲಿಂಕ್ಡಿನ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular