HomeCrimeಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯಿಂದ ಘೋರ ಕೃತ್ಯ: ಚಾಕುವಿನಿಂದ ಇರಿದು ಮಹಿಳೆ ಕೊಲೆ

ಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯಿಂದ ಘೋರ ಕೃತ್ಯ: ಚಾಕುವಿನಿಂದ ಇರಿದು ಮಹಿಳೆ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಮಹಿಳೆ ಕೊಲೆ ಮಾಡಲಾಗಿದೆ. ಬೆಂಗಳೂರಿನ ಜೆಜೆ ನಗರದ ನಾಲ್ಕನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.

ಪರ್ವೀನ್ ತಾಜ್ ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಅವರನ್ನು ಕೊಲೆ ಮಾಡಿ ಮಹಮ್ಮದ್ ಜುನೈದ್ ಪರಾರಿಯಾಗಿದ್ದಾನೆ. ಪತ್ನಿಯಿಂದ ಆರೋಪಿ ಮಹಮ್ಮದ್ ಜುನೈದ್ ದೂರವಿದ್ದ. ಈ ವಿಚಾರ ಠಾಣೆ ಮೆಟ್ಟಿಲೇರಿ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು. ಪತ್ನಿ ವಿಚಾರವಾಗಿ ಮಾನಸಿಕವಾಗಿ ಜುನೈದ್ ನೊಂದಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಆರೋಪಿಗೆ ಆತನ ಪತ್ನಿ ಸಂಬಂಧಿಯಾಗಿರುವ ಪರ್ವೀನ್ ತಾಜ್ ಹತ್ತಿರವಾಗಿದ್ದರು. ಇತ್ತೀಚೆಗೆ ಅವರೂ ಸಹ ಜುನೈದ್ ನನ್ನು ದೂರ ಮಾಡಿದ್ದರು. ಇದರಿಂದ ಕೋಪಗೊಂಡು ಪರ್ವೀನ್ ತಾಜ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ಸಂಭಂದ ಜೆಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular