HomeKarnatakaಚುಡಾಯಿಸಿದವನಿಗೆ ತಕ್ಕ ಪಾಠ ಕಲಿಸಿದ ಯುವತಿ; ವಿಡಿಯೋ ವೈರಲ್

ಚುಡಾಯಿಸಿದವನಿಗೆ ತಕ್ಕ ಪಾಠ ಕಲಿಸಿದ ಯುವತಿ; ವಿಡಿಯೋ ವೈರಲ್

ಬಸ್ ನಿಲ್ದಾಣದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ಯುವತಿಯೊಬ್ಬರು ತಕ್ಕ ಶಾಸ್ತಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಯಲ್ಲಿ ಜರುಗಿದೆ.

ಈತ ತನ್ನನ್ನು ಚುಡಾಯಿಸಿದ್ದಲ್ಲದೇ, ಉದ್ದೇಶಪೂರಿತವಾಗಿ ಮೈ ಮುಟ್ಟುತ್ತಿದ್ದ ಎಂದು ಯುವತಿ ಆಪಾದನೆ ಮಾಡಿದ್ದಾರೆ. ಹೀಗೆ ಮಾಡದಂತೆ ಎಚ್ಚರಿಕೆ ಕೊಟ್ಟರೂ ಸಹ ತನ್ನ ವರ್ತನೆ ಮುಂದುವರೆಸಿದ ಆತನಿಗೆ ಹೀಗೆ ಥಳಿಸಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ.

ಕೂಡಲೇ ಕಪಾಳ ಮೋಕ್ಷಕ್ಕೀಡಾದ ಯುವಕ ಬಸ್ಸಿನಿಂದ ಇಳಿದು ಹೊರಗೋಡಿದ್ದಾನೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಈ ಘಟನೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular