HomeKarnatakaಶಾಮನೂರು ಶಿವಶಂಕರಪ್ಪ ನಕಲಿ ಲೆಟರ್ ಹೆಡ್ ಬಳಸಿ ಕೆಲಸ ಪಡೆದ ಮಹಿಳೆ

ಶಾಮನೂರು ಶಿವಶಂಕರಪ್ಪ ನಕಲಿ ಲೆಟರ್ ಹೆಡ್ ಬಳಸಿ ಕೆಲಸ ಪಡೆದ ಮಹಿಳೆ

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ ಹೆಡ್ ಮತ್ತು ಸಹಿ ಬಳಸಿಕೊಂಡು ಆಪ್ತ ಸಹಾಯಕರಾಗಿ ವಿಧಾನಸಭಾ ಸಚಿವಾಲಯದಿಂದ ಮಹಿಳೆಯೊಬ್ಬರು ನೇಮಕಾತಿ ಆದೇಶ ಪಡೆದಿದ್ದಾರೆ.

ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಅವರು ನೀಡಿದ ದೂರು ಆಧರಿಸಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ನಿವಾಸಿ ಕೆ.ಸಿ. ವಿನುತಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಕೆ.ಸಿ. ವಿನುತಾ ಅವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸುವಂತೆ ಶಾಸಕರು ಮನವಿ ಮಾಡಿರುವ ರೀತಿ ಲೆಟರ್ ಹೆಡ್ ನಲ್ಲಿ ಪತ್ರ ತಯಾರಿಸಿ ಸಹಿ ಮಾಡಿ ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಶಾಸಕರೇ ನೀಡಿದ ಪತ್ರ ಇದೊಂದು ಭಾವಿಸಿದ ಸಚಿವಾಲಯದ ಅಧಿಕಾರಿಗಳು ವಿನುತಾ ಅವರನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಬಳಿಕ ಅದು ನಕಲಿ ಎಂದು ಗೊತ್ತಾಗಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular