ಮೈಸೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಕಂಪನಿ ಮಾಲೀಕನ ವಿರುದ್ಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಮಾಲೀಕ ಮುರಳೀಧರ್ ವಿರುದ್ಧ ಅದೇ ಕಂಪನಿಯ ಮಹಿಳಾ ಉದ್ಯೋಗಿ ದೂರು ನೀಡಿದ್ದಾರೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಕೆಲಸದ ವೇಳೆ ಕಂಪನಿ ಮಾಲೀಕ ಮುರಳಿಧರ್ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಮಹಿಳೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಮಹಿಳೆಯ ಮನೆಗೂ ಬಂದಿದ್ದ ಆರೋಪಿ ಕೆಲಸಕ್ಕೆ ಬರುವಂತೆ ಒತ್ತಾಯ ಮಾಡಿದ್ದ. ಬೇರೆ ಎಲ್ಲಿಯೂ ಕೆಲಸ ಸಿಗದಂತೆ ಮಾಡುತ್ತೇನೆ. ರೌಡಿಗಳಿಂದ ಗಲಾಟೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ನೊಂದ ಮಹಿಳೆ ಹೆಬ್ಬಾಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
