ಸ್ಯಾನಿಟರಿ ಪ್ಯಾಡ್​ ಜೊತೆ ಕುಕೀಸ್​ಗಳನ್ನು ಕೊಟ್ಟ ಸ್ವಿಗ್ಗಿ: ಮಹಿಳೆ ಖುಷ್​

ಸ್ವಿಗ್ಗಿಯ ಎಕ್ಸ್‌ಪ್ರೆಸ್ ಕಿರಾಣಿ ವಿತರಣಾ ವೇದಿಕೆ ಇನ್​ಸ್ಟಾಮಾರ್ಟ್​ನಿಂದ ಸ್ಯಾನಿಟರಿ ಪ್ಯಾಡ್​ ಆರ್ಡರ್​ ಮಾಡಿದಾಗ ಅದರ ಜೊತೆ ತಮಗೆ ಚಾಕಲೇಟ್​ ಕೂಡ ಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದ ನಂತರ ಆರ್ಡರ್‌ನೊಂದಿಗೆ ಕೆಲವು ಚಾಕೊಲೇಟ್ ಕುಕೀಗಳನ್ನು ಸ್ವೀಕರಿಸಿದ ನಂತರ ಆಶ್ಚರ್ಯಚಕಿತರಾಗಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಸಮೀರಾ ಎನ್ನುವವರು ತಮ್ಮ ಅನುಭವವನ್ನು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದ್ದೆ, ಅದರ ಜೊತೆಗೆ ಚಾಕೊಲೇಟ್ ಕುಕೀಗಳೂ ಇದ್ದವು. ನನಗೆ ತುಂಬಾ ಸಂತೋಷವಾಯಿತು. ಇದನ್ನು ಸ್ವಿಗ್ಗಿಯವರು ಕೊಟ್ಟಿದ್ದಾ ಅಥವಾ ಅಂಗಡಿಯವರೋ ಎಂದು ತಿಳಿದಿಲ್ಲ ಎಂದಿದ್ದಾರೆ.

ಅದಕ್ಕೆ ಬಳಕೆದಾರರು ಕಮೆಂಟ್​ ಮಾಡಿದ್ದು, ಸ್ವಿಗ್ಗಿ  ತನ್ನ ಪ್ರಮೋಷನ್​ಗಾಗಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಕೊಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ಸುದ್ದಿಯನ್ನು ವೈರಲ್​ ಮಾಡಿದರೆ ಮತ್ತಷ್ಟು ಪ್ರಚಾರ ಸಿಕ್ಕು ಹೆಚ್ಚು ಜನರು ಸ್ವಿಗ್ಗಿಯಿಂದ ಸಾಮಾನುಗಳನ್ನು ಆರ್ಡರ್​ ಮಾಡಲಿ ಎನ್ನುವ ಕಾರಣಕ್ಕೆ ಹೀಗೆ ಚಿಕ್ಕಪುಟ್ಟ ಗಿಫ್ಟ್​ ನೀಡುವುದು ಮಾಮೂಲು ಎಂದು ಹೇಳಿದ್ದಾರೆ.

https://twitter.com/sameeracan/status/1618165955489861636?ref_src=twsrc%5Etfw%7Ctwcamp%5Etweetembed%7Ctwterm%5E161

https://twitter.com/sameeracan/status/1618165955489861636?ref_src=twsrc%5Etfw%7Ctwcamp%5Etweetembed%7Ctwterm%5E1618167396065505280%7Ctwgr%5E44ff7b6f46aa8886f7966867e5d44572c71cc190%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fwoman-orders-sanitary-pads-from-swiggy-receives-chocolate-cookies-along-with-it-3726196

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read