ಪ್ರಿಯಕರನೊಂದಿಗೆ ಪರಾರಿಯಾಗಲು ಆತ್ಮಹತ್ಯೆ ಕಥೆ ಕಟ್ಟಿದ ವಿವಾಹಿತೆ; ಭಿಕ್ಷುಕಿಯ ಕತ್ತು ಹಿಸುಕಿ ಕೊಲೆ…!

ಆಘಾತಕಾರಿ ಪ್ರಕರಣವೊಂದರಲ್ಲಿ, ಗುಜರಾತ್‌ನ ಕಚ್‌ನಲ್ಲಿ 27 ವರ್ಷದ ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ವೃದ್ಧೆಯೊಬ್ಬಳನ್ನು ಕೊಲೆ ಮಾಡಿ ಶವ ಸುಟ್ಟು ಬಳಿಕ ತಾನೇ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ರಾಮಿ ಕೇಸರಿಯಾ ಮತ್ತು ಅನಿಲ್ ಗಂಗಲ್ ಬಂಧಿತರಾಗಿದ್ದು, ಅಪರಾಧ ಕೃತ್ಯ ನಡೆದ ಮೂರು ತಿಂಗಳ ನಂತರ ಶನಿವಾರದಂದು ಇವರ ಬಂಧನವಾಗಿದೆ. ರಾಮಿ ಈ ಮೊದಲೇ ಅನಿಲ್‌ ಗಂಗಲ್‌ ನನ್ನು ಪ್ರೀತಿಸುತ್ತಿದ್ದು, ಆದರೆ ಆತನೊಂದಿಗೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೊಬ್ಬನೊಂದಿಗೆ ಮದುವೆಯಾದರೂ ಕೂಡಾ ಅನಿಲ್‌ ಜೊತೆಗಿನ ಸಂಪರ್ಕವನ್ನು ಬಿಟ್ಟಿರಲಿಲ್ಲ.  ಹಾಗಾಗಿ, ತಾನು ಮತ್ತು ಅನಿಲ್ ಒಟ್ಟಿಗೆ ಬದುಕುವ ಏಕೈಕ ಮಾರ್ಗವೆಂದರೆ ತಾನು ಸತ್ತಿರುವಂತೆ ಬಿಂಬಿಸುವುದು ಎಂಬ ಕಾರಣಕ್ಕೆ ಸಂಚು ರೂಪಿಸಿದ್ದಳು.

ಇದಕ್ಕಾಗಿ ತನ್ನ ಪ್ರಿಯಕರನ ಜೊತೆ ಸೇರಿದ್ದು, ಕುಟುಂಬವಿಲ್ಲದ ಭಿಕ್ಷುಕಿಯನ್ನು ಅನಿಲ್ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ರಾಮಿ ತನ್ನ ಕುಟುಂಬಕ್ಕೆ ವಾಟ್ಸಾಪ್ ವಿಡಿಯೋ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಕೃಷಿ ಭೂಮಿಯಲ್ಲಿ ವೃದ್ಧೆಯ ದೇಹವನ್ನು ಸುಟ್ಟು ಹಾಕಿದ್ದು, ರಾಮಿ ತನ್ನ ಮೊಬೈಲ್ ಮತ್ತು ಪಾದರಕ್ಷೆಗಳನ್ನು ಚಿತೆಯ ಬಳಿ ಬಿಟ್ಟು ಹೋಗಿದ್ದಳು, ಇದರಿಂದಾಗಿ ಆಕೆಯ ಕುಟುಂಬಸ್ಥರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ್ದರು.

ಬಳಿಕ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟ ರಾಮಿ ಮತ್ತು ಅನಿಲ್ ಸೆಪ್ಟೆಂಬರ್ 29 ರಂದು ತನ್ನ ತಂದೆಯನ್ನು ಭೇಟಿ ಮಾಡಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ತನ್ನ ಮಗಳ ದೆವ್ವ ಈ ಕಥೆಯನ್ನು ಹೇಳುತ್ತಿದೆ ಎಂದು ಭಾವಿಸಿದ್ದ ಆತ ನಂತರ ಸತ್ಯವನ್ನು ಅರಿತು ಪೊಲೀಸರ ಮುಂದೆ ತಮ್ಮ ಅಪರಾಧವನ್ನು ಒಪ್ಪಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಜೋಡಿ ಆ ಸಂದರ್ಭದಲ್ಲಿ ಪರಾರಿಯಾಗಿದ್ದು, ಆಕೆಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಎರಡು ದಿನಗಳ ಹಿಂದೆ ರಾಮಿ ಮತ್ತು ಅನಿಲ್ ಅವರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read