ಸಿನಿ ತಾರೆಯರು ಸದಾ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿ ಇರುತ್ತಾರೆ. ಆಲಿಯಾ ಭಟ್, ಜಾಹ್ನವಿ ಕಪೂರ್ನಿಂದ ವರುಣ್ ಧವನ್ ಮತ್ತು ಅರ್ಜುನ್ ಕಪೂರ್……. ಹೀಗೆ ಬಹುತೇಕ ಎಲ್ಲಾ ಸ್ಟಾರ್ ಕಿಡ್ಗಳು ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಈಗ ಚರ್ಚೆ, ಗಾಸಿಪ್ಗಳ ಭಾಗವಾಗುತ್ತಾರೆ.
ಈ ಬಾರಿ ಜಾಹ್ನವಿ ಕಪೂರ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, ಇದೀಗ ಚರ್ಚೆಯ ವಸ್ತುವಾಗಿದೆ.
ಅದೇನೆಂದರೆ “ಕ್ರೌನಿಸ್ಟ್” ಎಂಬ ಹೆಸರಿನ ಬಳಕೆದಾರರು ಟ್ವಿಟರ್ನಲ್ಲಿ ನಟಿಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು, “ದೇವರು ಇರುವುದು ನಿಜ. ಜಾಹ್ನವಿ ಕಪೂರ್ಳ ಪ್ಲಾಸ್ಟಿಕ್ ಸರ್ಜನ್ ದೇವರು” ಎಂದು ಬರೆದಿದ್ದಾರೆ.
ಜಾಹ್ನವಿ ಸುಂದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮುನ್ನ ಆಕೆಯ ಮುಖಚರ್ಯೆಯನ್ನು ಸುಂದರವಾಗಿ ರೂಪುಗೊಳಿಸಲಾಗಿದೆ ಎಂದು ಬರೆದಿರುವುದು ಜಾಹ್ನವಿ ಕಪೂರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜಾಹ್ನವಿ ಕಪೂರ್ ತಾಯಿ ನಟಿ ಶ್ರೀದೇವಿ ಕೂಡ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಹಲವು ನಟಿಯರು ಪ್ಲಾಸ್ಟಿಕ್ ಸರ್ಜರಿ ಮೂಲಕ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವಂತೆ ಜಾಹ್ನವಿ ಕಪೂರ್ ಕೂಡ ಮಾಡಿಕೊಂಡಿದ್ದಾರೆ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ.
ಇದನ್ನು ಓದಿದ ಬಳಕೆದಾರರು ಜಾಹ್ನವಿ ಕಪೂರ್ಳ ಸೌಂದರ್ಯ ನೋಡಿ ಅಸೂಯೆಯಿಂದ ಹೀಗೆ ಬರೆದಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.
god is real. he’s janhvi kapoors plastic surgeon pic.twitter.com/5fINgARKSJ
— k (@krownnist) January 27, 2023
https://twitter.com/tharshini_/status/1619530111203819520?ref_src=twsrc%5Etfw%7Ctwcamp%5Etweetembed%7Ctwterm%5E1619530111203819520%7Ctwgr%5Edfff87e8f416fdf41882b1dfd11e588f528acc26%7Ctwcon%5Es1_&ref_url=https%3A%2F%2Fwww.news18.com%2Fbuzz%2Fwoman-gets-slammed-for-attributing-janhvi-kapoors-beauty-to-a-plastic-surgeon-6943777.html
I'd never understand why y'all are so bitter and mean on this app like get a life!?? https://t.co/7PL4CCrlGl
— Anju (@JuInAWonderland) January 28, 2023

