Shocking: ಧೂಳಿನಿಂದ ಮೂಗು ಕಟ್ಟಿಕೊಂಡಿದೆ ಎಂದು ನಂಬಿದ್ದ ಮಹಿಳೆ ಮೂಗಲ್ಲಿ ನೂರಾರು ಹುಳುಗಳು ಪತ್ತೆ…!

ಉತ್ತರ ಥಾಯ್ಲೆಂಡ್‌ನ ಮಹಿಳೆಯೊಬ್ಬರ ಮೂಗಿನಲ್ಲಿ ನೂರಾರು ಸಣ್ಣ ಹುಳುಗಳು ಪತ್ತೆಯಾಗಿವೆ. ಮೂಗು ಮುಚ್ಚಿಕೊಂಡಿದೆ ಎಂದು ಆಸ್ಪತ್ರೆಗೆ ಹೋದ ನಂತರ ತನ್ನ ಮೂಗಿನ ಹೊಳ್ಳೆಗಳಲ್ಲಿ ನೂರಾರು ಹುಳುಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. 59 ವರ್ಷದ ಮಹಿಳೆಗೆ ಒಂದು ವಾರದಿಂದ ಮೂಗು ಕಟ್ಟಿಕೊಂಡು ಮುಖದಲ್ಲಿ ನೋವಿನಿಂದ ಬಳಲುತ್ತಿದ್ದರು. ಆರಂಭದಲ್ಲಿ, ಗಾಳಿಯಲ್ಲಿ ಹೆಚ್ಚಿನ ಧೂಳಿನ ಕಣದಿಂದಾಗಿ ಉಸಿರಾಟದ ತೊಂದರೆ ಉಂಟಾಗಿರಬಹುದು ಎಂದು ಭಾವಿಸಿದ್ದರು.

ಮೂಗಿನಲ್ಲಿ ರಕ್ತಸ್ರಾವ ಆರಂಭವಾದ ನಂತರ ತನ್ನ ಮೂಗಿನಿಂದ ಹೊರಬರುತ್ತಿದ್ದ ಹತ್ತಾರು ಸಣ್ಣ ಹುಳುಗಳನ್ನು ಗುರುತಿಸಿದಳು. ತಕ್ಷಣ ಅವರು ಉತ್ತರ ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಪ್ರಾಂತ್ಯದ ನಕೋರ್ನ್‌ಪಿಂಗ್ ಆಸ್ಪತ್ರೆಗೆ ತಪಾಸಣೆಗಾಗಿ ಹೋದರು.

ಅಲ್ಲಿ ವೈದ್ಯರು ತಪಾಸಣೆ ನಡೆಸಿ ಎಕ್ಸ್-ರೇ ಮಾಡಿದ ನಂತರ ಆಕೆಯ ಮೂಗಿನ ಹೊಳ್ಳೆಗಳಲ್ಲಿ ಕೆಲವು ಹುಳುಗಳು ಪತ್ತೆಯಾದವೆಂದು ವರದಿಯಾಗಿದೆ. ವೈದ್ಯಕೀಯ ತಂಡವು ಮಹಿಳೆಯ ಮೂಗಿನ ಹೊಳ್ಳೆಗಳಲ್ಲಿ ಎಂಡೋಸ್ಕೋಪ್ ಅಳವಡಿಸಿದ ನಂತರ ನೂರಕ್ಕೂ ಹೆಚ್ಚು ಹುಳುಗಳು ಕಾಣಿಸಿಕೊಂಡವು. ಆಕೆಯ ದೇಹದಿಂದ ಹುಳುಗಳನ್ನು ತೆಗೆದ ನಂತರ ರೋಗಿಯ ಸ್ಥಿತಿಯು ಸುಧಾರಿಸಿತು.

ವೈದ್ಯರ ಪ್ರಕಾರ, ಹುಳುಗಳನ್ನು ಹಾಗೇ ಬಿಟ್ಟಿದ್ದರೆ ಅವು ಕಣ್ಣು ಅಥವಾ ಮೆದುಳಿಗೆ ಹರಡಿ ಅಂಗವೈಕಲ್ಯ ಮತ್ತು ಸಾವಿಗೆ ಕಾರಣವಾಗಬಹುದಿತ್ತು ಎಂದು ವರದಿಯಾಗಿದೆ. ಚಿಯಾಂಗ್ ಮಾಯ್‌ನಂತಹ ದೇಶದ ಉತ್ತರ ಪ್ರದೇಶಗಳಲ್ಲಿ ವಾಸಿಸುವ ಜನರು ಉಸಿರಾಟದ ಪರಿಸ್ಥಿತಿಗಳಿಗೆ, ವಿಶೇಷವಾಗಿ ರಿನಿಟಿಸ್ ಮತ್ತು ಅಲರ್ಜಿಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ವರದಿಗಳು ಹೇಳುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read