HomeInternationalವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್​ ಕಳುಹಿಸಲು ಚಾಟ್ ​ಜಿಪಿಟಿಗೆ ಹೇಳಿದ ಮಹಿಳೆ

ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್​ ಕಳುಹಿಸಲು ಚಾಟ್ ​ಜಿಪಿಟಿಗೆ ಹೇಳಿದ ಮಹಿಳೆ

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ ಶುರುವಾಗಿರುವ ಈ ಆ್ಯಪ್​ ಕೋಲಾಹಲವನ್ನೇ ಸೃಷ್ಟಿಸಿದೆ.

ಈಗ, ಮಹಿಳೆಯೊಬ್ಬರು ತಮ್ಮ ವಿಮಾನವು ಆರು ಗಂಟೆಗಳ ಕಾಲ ವಿಳಂಬವಾದ ನಂತರ ಏರ್‌ಲೈನ್‌ಗೆ ಇಮೇಲ್ ಬರೆಯಲು ಚಾಟ್‌ಜಿಪಿಟಿಯನ್ನು ಕೇಳಿಕೊಂಡಿದ್ದರು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಅದೀಗ ವೈರಲ್​ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆರಿ ಲುವೊ ಅವರು ಚಾಟ್‌ಬಾಟ್‌ನಿಂದ ರಚಿಸಲಾದ ತ್ವರಿತ ಇಮೇಲ್ ಅನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ವಿಮಾನಯಾನ ಸಂಸ್ಥೆಗೆ ಸಭ್ಯ ರೀತಿಯಲ್ಲಿ ಆದರೆ ಅವರಿಗೆ ಬುದ್ಧಿ ಬರುವಂಥ ಇ-ಮೇಲ್​ ಒಂದನ್ನು ಬರೆಯಿರಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.

ನಂತರ ಚಾಟ್​ಜಿಪಿಟಿ ಇ-ಮೇಲ್​ ಬರೆದು ಅದನ್ನು ವಿಮಾನಯಾನ ಸಂಸ್ಥೆಗೆ ಕಳುಹಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ನನ್ನ ವಿಮಾನವು 6 ಗಂಟೆಗಳಷ್ಟು ವಿಳಂಬವಾಯಿತು. ಅವರ ವೇಯ್ಟ್‌ಲಿಸ್ಟ್‌ನಲ್ಲಿ ನಾವು 3 ಗಂಟೆಗಳ ಕಾಲ ಕಾಯುತ್ತಿದ್ದರೂ ಪಾಸ್ ಲಾಂಜ್​ನಲ್ಲಿ ನಮ್ಮನ್ನು ಪ್ರವೇಶಿಸಲು ಬಿಡಲಿಲ್ಲ. ಈ ಹಿನ್ನೆಲೆಯಲ್ಲಿ ಹತಾಶೆಯಿಂದ ಚಾಟ್​ಜಿಪಿಟಿ ನೆರವು ಪಡೆದಿರುವುದಾಗಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular