ಶೀಲ ಶಂಕಿಸಿ ಜಗಳದ ವೇಳೆ ಕೈ ತಿರುಚಿದ ಪತಿ: ಅಡುಗೆ ಮನೆಯಿಂದ ಚಾಕು ತಂದು ಎದೆಗೆ ಇರಿದ ಪತ್ನಿ

ತಿರುವನಂತಪುರಂ: ಕೇರಳದ ತ್ರಿಶೂರ್‌ ನಲ್ಲಿ ಪತಿಯನ್ನು ಹತ್ಯೆಗೈದ ಮಹಿಳೆಯನ್ನು ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ತ್ರಿಶೂರ್ ಜಿಲ್ಲೆಯ ವರಂತಪಲ್ಲಿ ಮೂಲದ ನಿಶಾ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮೃತ ವಿನೋದ್ ಗೆ ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನವಿದ್ದು, ನಿತ್ಯ ಜಗಳ ನಡೆಯುತ್ತಿತ್ತು. ಜುಲೈ 11 ರಂದು ವಿನೋದ್ ನಿಶಾಳ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ನಿರಂತರವಾಗಿ ಎಂಗೇಜ್ ಬರುತ್ತಿತ್ತು. ಇದರಿಂದ ಕುಪಿತಗೊಂಡ ವಿನೋದ್ ಮನೆಗೆ ಬಂದು ನಿಶಾ ಜೊತೆ ಜಗಳವಾಡಿದ್ದಾನೆ.

ವಿನೋದ್ ನಿಶಾಳ ಕೈ ತಿರುಚಿದ್ದು, ಅವಳು ತಕ್ಷಣ ಅಡುಗೆಮನೆಯಿಂದ ಚಾಕು ತೆಗೆದುಕೊಂಡು ವಿನೋದ್ ಅವರ ಎದೆಗೆ ಮೂರು ಬಾರಿ ಇರಿದಿದ್ದಾಳೆ. ವಿನೋದ್ ತಕ್ಷಣ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಶಾ ಮನೆಯಲ್ಲಿ ಇರಲಿಲ್ಲ. ಹಿಂತಿರುಗಿ ಬಂದಾಗ ವಿನೋದ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ ಎಂದು ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದು, ಪೊಲೀಸರು, ತನಿಖೆ ನಡೆಸಿ ನಿಶಾ ವರ್ತನೆ ಬಗ್ಗೆ ಅನುಮಾನದಿಂದ ವಿಚಾರಣೆ ನಡೆಸಿದಾಗ ಗಂಡನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read