ಬ್ಯಾಂಕುಗಳು ಮತ್ತು ಸಾಲದಾತರು ಸಾಲ (Loan) ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ನೀಡುವ ಮೊದಲು ಸಿಬಿಲ್ ಸ್ಕೋರ್ ಅನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಆದರೆ 700 ಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ಸಾಲ ಪಡೆಯುವುದು ಕಷ್ಟವಾಗುತ್ತದೆ; ಒಂದು ವೇಳೆ ಸಾಲ ಸಿಕ್ಕರೂ ಹೆಚ್ಚಿನ ಬಡ್ಡಿ ದರ ಮತ್ತು ಗ್ಯಾರಂಟಿದಾರರ ಅಗತ್ಯವಿರುತ್ತದೆ.
ಬಳಸದ ಬ್ಯಾಂಕ್ ಖಾತೆಗಳು ಮತ್ತು ಸಿಬಿಲ್ ಸ್ಕೋರ್
ಹಳೆಯ ಅಥವಾ ಬಳಸದ ಬ್ಯಾಂಕ್ ಖಾತೆಗಳಿಂದ ಸಿಬಿಲ್ ಸ್ಕೋರ್ ಮೇಲೆ ನೇರವಾದ ಪರಿಣಾಮ ಬೀರದು. ಏಕೆಂದರೆ ಉಳಿತಾಯ (Savings) ಅಥವಾ ಚಾಲ್ತಿ (Current) ಖಾತೆಗಳನ್ನು ‘ಕ್ರೆಡಿಟ್ ಉತ್ಪನ್ನ’ಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಇವು ಪರೋಕ್ಷವಾಗಿ ತೊಂದರೆ ನೀಡಬಹುದು:
- ನೆಗೆಟಿವ್ ಬ್ಯಾಲೆನ್ಸ್ ಮತ್ತು ದಂಡ: ಬಳಸದ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಇಲ್ಲದಿದ್ದರೆ ಬ್ಯಾಂಕ್ಗಳು ದಂಡ ವಿಧಿಸುತ್ತವೆ. ನೀವು ಅದನ್ನು ಗಮನಿಸದಿದ್ದರೆ ಖಾತೆಯ ಬ್ಯಾಲೆನ್ಸ್ ‘ನೆಗೆಟಿವ್’ ಆಗುತ್ತದೆ. ಇದನ್ನು ಬಾಕಿ ಎಂದು ಪರಿಗಣಿಸಿ ಬ್ಯಾಂಕ್ಗಳು ವರದಿ ಮಾಡಿದರೆ ಕ್ರೆಡಿಟ್ ರೇಟಿಂಗ್ ಮೇಲೆ ಪ್ರಭಾವ ಬೀರಬಹುದು.
- ಲಿಂಕ್ ಆಗಿರುವ ಪಾವತಿಗಳು: ನಿಮ್ಮ ಹಳೆಯ ಖಾತೆಗೆ ಯಾವುದಾದರೂ ಇಎಂಐ (EMI) ಅಥವಾ ಬಿಲ್ ಪಾವತಿಗಳು ಲಿಂಕ್ ಆಗಿದ್ದು, ಅಲ್ಲಿ ಹಣದ ಕೊರತೆಯಿಂದ ಪಾವತಿ ವಿಫಲವಾದರೆ (Bounce), ನಿಮ್ಮ ಸಿಬಿಲ್ ಸ್ಕೋರ್ ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ.
ಬಳಸದ ಹಳೆಯ ಬ್ಯಾಂಕ್ ಖಾತೆಗಳನ್ನು ಏನು ಮಾಡಬೇಕು?
• ಖಾತೆ ಕ್ಲೋಸ್ ಮಾಡಿ: ಸಾಧ್ಯವಾದಷ್ಟು ಮಟ್ಟಿಗೆ ನೀವು ಬಳಸದ ಹಳೆಯ ಬ್ಯಾಂಕ್ ಖಾತೆಗಳನ್ನು ಮುಚ್ಚುವುದು ಉತ್ತಮ. ಇದರಿಂದ ಅನಗತ್ಯ ಶುಲ್ಕಗಳು ಮತ್ತು ದಂಡಗಳಿಂದ ತಪ್ಪಿಸಿಕೊಳ್ಳಬಹುದು.
• ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಿ: ಒಂದು ವೇಳೆ ಖಾತೆಯನ್ನು ಮುಚ್ಚಲು ಇಷ್ಟವಿಲ್ಲದಿದ್ದರೆ, ಅದರಲ್ಲಿ ಕಡ್ಡಾಯವಾಗಿ ಕನಿಷ್ಠ ಬ್ಯಾಲೆನ್ಸ್ ಇರಿಸಿ.
• ನಿಗಾ ಇರಲಿ: ಬ್ಯಾಂಕ್ ವಹಿವಾಟುಗಳ ಮೇಲೆ ನಿಗಾ ಇಡಿ. ಯಾವುದೇ ಅನಧಿಕೃತ ವಹಿವಾಟು ಅಥವಾ ಸೈಬರ್ ವಂಚನೆ ನಡೆದರೆ ಕೂಡಲೇ ಬ್ಯಾಂಕಿಗೆ ವರದಿ ಮಾಡಿ.
ಸಿಬಿಲ್ (CIBIL) ಸ್ಕೋರ್ ಎಂದರೇನು?
ಸಿಬಿಲ್ ಎಂಬುದು ಒಂದು ಕ್ರೆಡಿಟ್ ಸ್ಕೋರ್ ಆಗಿದೆ. ಇದರ ಪೂರ್ಣ ರೂಪ ‘ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್’. ಭಾರತದಲ್ಲಿ ಆರ್ಬಿಐ (RBI) ನಿಂದ ಮಾನ್ಯತೆ ಪಡೆದ ನಾಲ್ಕು ಪ್ರಮುಖ ಕ್ರೆಡಿಟ್ ಬ್ಯೂರೋಗಳೆಂದರೆ:
- ಟ್ರಾನ್ಸ್ ಯೂನಿಯನ್ ಸಿಬಿಲ್ (CIBIL)
- ಇಕ್ವಿಫ್ಯಾಕ್ಸ್ (Equifax)
- ಸಿಆರ್ಐಎಫ್ ಹೈಮಾರ್ಕ್ (CRIF High Mark)
- ಎಕ್ಸ್ಪೀರಿಯನ್ (Experian)

