ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣ ವಿವಾದ ಉಂಟಾದ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣದಲ್ಲಿಯೂ ಇಂತಹುದೇ ಪರಿಸ್ಥಿತಿ ಎದುರಾಗಬಹುದು ಎನ್ನುವ ಕುತೂಹಲ ಮೂಡಿದೆ.
ನಿಯಮಾನುಸಾರ ಗಣರಾಜ್ಯೋತ್ಸವ ಭಾಷಣವನ್ನು ರಾಜ್ಯಪಾಲರಿಗೆ ರಾಜ್ಯ ಸರ್ಕಾರವೇ ಸಿದ್ದಪಡಿಸಿ ಕೊಡುತ್ತದೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನುದಾನ ಹಂಚಿಕೆ ತಾರತಮ್ಯ, ವಿವಿಧ ಯೋಜನೆಗಳಿಗೆ ಅನುದಾನ ಕಡಿತ, ತೆರಿಗೆ ಕಡಿತ ಸೇರಿದಂತೆ ಇತರೆ ನೀತಿಗಳನ್ನು ಟೀಕಿಸುವ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ರಾಜ್ಯ ಸರ್ಕಾರ ಸಿದ್ದ ಮಾಡಿಕೊಟ್ಟ ಭಾಷಣ ಓದುವ ವಿಚಾರವಾಗಿ ನಿರಾಕರಿಸಿ ತಿದ್ದುಪಡಿಗೆ ಸಲಹೆ ನೀಡಬಹುದೇ ಅಥವಾ ಸರ್ಕಾರದ ಭಾಷಣ ಓದುವರೇ ಎನ್ನುವ ಕುತೂಹಲ ಮೂಡಿದೆ.

