ಆಡಳಿತ ಮಂಡಳಿ ಎಲ್ಲಾ ಸದಸ್ಯರು ರಾಜೀನಾಮೆ ನೀಡದಿದ್ದರೆ ‘ನಿರ್ಗಮಿಸುತ್ತೇವೆ’: 500 ಕ್ಕೂ ಹೆಚ್ಚು OpenAI ಉದ್ಯೋಗಿಗಳಿಂದ ಬೆದರಿಕೆ ಪತ್ರ

ವಾಷಿಂಗ್ಟನ್: ಪ್ರಸ್ತುತ ಮಂಡಳಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡದಿದ್ದಲ್ಲಿ ಓಪನ್‌ ಎಐನ 500 ಕ್ಕೂ ಹೆಚ್ಚು ಉದ್ಯೋಗಿಗಳು ಕಂಪನಿಯನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉದ್ಯೋಗಿಗಳ ಪತ್ರವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಅವರು ಮೈಕ್ರೋಸಾಫ್ಟ್‌ನ ಹೊಸ ವಿಭಾಗದಲ್ಲಿ ಮಾಜಿ ಬಾಸ್ ಸ್ಯಾಮ್ ಆಲ್ಟ್‌ ಮ್ಯಾನ್‌ಗೆ ಸೇರುವುದಾಗಿ ಹೇಳಿದರು.

ನೀವು ಸ್ಯಾಮ್ ಆಲ್ಟ್‌ ಮ್ಯಾನ್ ಅವರನ್ನು ವಜಾಗೊಳಿಸಿದ ಮತ್ತು ಗ್ರೆಗ್ ಬ್ರಾಕ್‌ಮನ್ ಅವರನ್ನು ಮಂಡಳಿಯಿಂದ ತೆಗೆದುಹಾಕುವ ಪ್ರಕ್ರಿಯೆಯು ಈ ಎಲ್ಲಾ ಕೆಲಸಗಳಿಗೆ ಧಕ್ಕೆ ತಂದಿದೆ. ನಮ್ಮ ಮಿಷನ್ ಮತ್ತು ಕಂಪನಿಯನ್ನು ದುರ್ಬಲಗೊಳಿಸಿದೆ ನಿಮ್ಮ ನಡವಳಿಕೆಯು ನಿಮಗೆ OpenAI ಅನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಬೆದರಿಕೆ ಹಾಕಿದವರಲ್ಲಿ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರತಿ, ಮುಖ್ಯ ದತ್ತಾಂಶ ವಿಜ್ಞಾನಿ ಇಲ್ಯಾ ಸುಟ್‌ಸ್ಕೇವರ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬ್ರಾಡ್ ಲೈಟ್‌ಕ್ಯಾಪ್ ಸೇರಿದ್ದಾರೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಚಾಟ್ ಜಿಪಿಟಿಯ ಮಾತೃ ಸಂಸ್ಥೆ ಓಪನ್ ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್ ಮ್ಯಾನ್ ಈಗ ಮೈಕ್ರೋಸಾಫ್ಟ್ ಕಂಪನಿ ಸೇರಿದ್ದಾರೆ. ಅವರನ್ನು ಶನಿವಾರ ಓಪನ್ ಎಐ ಆಡಳಿತ ಮಂಡಳಿ ವಜಾಗೊಳಿಸಿತು. ಸೋಮವಾರ ಸ್ಯಾಮ್ ಮತ್ತು ಅವರ ತಂಡದಲ್ಲಿದ್ದವರನ್ನು ಮೈಕ್ರೋಸಾಫ್ಟ್ ಕಂಪನಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಿಇಓ ಸತ್ಯ ನಾಡೆಲ್ಲ ಪ್ರಕಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read