ನಿಜವಾಗುತ್ತಾ ʼಬಾಬಾ ವಂಗಾʼ ಭವಿಷ್ಯ ? ಮಾನವ ಸಂಬಂಧಗಳಿಗೆ ಕಂಟಕ ತರುತ್ತಂತೆ ʼಮೊಬೈಲ್‌ʼ ಗೀಳು !

ಇಡೀ ಜಗತ್ತು ಸ್ಮಾರ್ಟ್‌ಫೋನ್‌ಗಳ ಭರಾಟೆಯಲ್ಲಿ ಮುಳುಗಿರುವಾಗ ಬಾಬಾ ವಂಗಾ ಈ ಬಗ್ಗೆ ಆಘಾತಕಾರಿ ಭವಿಷ್ಯವೊಂದನ್ನು ನುಡಿದಿದ್ದಾರೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ಜನರ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ. ಎಂದಿನಂತೆ ಯುದ್ಧ, ಭೂಕಂಪದಂತಹ ಭೀಕರ ದುರಂತಗಳ ಬಗ್ಗೆ ಭವಿಷ್ಯ ನುಡಿಯದ ಬಾಬಾ ವಂಗಾ, ಈ ಬಾರಿ ಮೊಬೈಲ್ ಫೋನ್‌ಗಳ ಗೀಳು ಮನುಷ್ಯರ ನಡುವಿನ ಸಂಬಂಧಗಳನ್ನೇ ಕಡಿದು ಹಾಕಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅವರ ಭವಿಷ್ಯದ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ವ್ಯಸನವು ಮನುಷ್ಯರನ್ನು ಭಾವನೆಗಳಿಲ್ಲದ ಯಂತ್ರಗಳಂತೆ ಪರಿವರ್ತಿಸಬಹುದು. ಜನರು ಯಂತ್ರಗಳಿಗೇ ಅಂಟಿಕೊಂಡಿರುತ್ತಾರೆ ಮತ್ತು ನಿಜವಾದ ಪ್ರೀತಿ, ವಿಶ್ವಾಸದಂತಹ ಭಾವನೆಗಳನ್ನು ಅನುಭವಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನ ಒಂದು ಮುಖ್ಯ ಭಾಗವಾಗಿದ್ದರೂ, ಯುವಜನರಲ್ಲಿ ಇದರ ಅತಿಯಾದ ಬಳಕೆ ನಿದ್ರೆಯ ಚಕ್ರವನ್ನು ಹಾಳು ಮಾಡುತ್ತಿದೆ, ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿದೆ ಮತ್ತು ಗಮನ ಕೇಂದ್ರೀಕರಿಸುವ ಶಕ್ತಿಯನ್ನು ಕಡಿಮೆ ಮಾಡುತ್ತಿದೆ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಸದಾ ಬರುತ್ತಿರುವ ನೋಟಿಫಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮವು ಜನರನ್ನು ವಾಸ್ತವ ಜಗತ್ತಿನಿಂದ ದೂರವಿಟ್ಟು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ.

ತಜ್ಞರು ಹೇಳುವಂತೆ, ಅತಿಯಾದ ಮೊಬೈಲ್ ಫೋನ್ ಬಳಕೆಯು ಆತಂಕ, ಖಿನ್ನತೆ ಮತ್ತು ಒಂಟಿತನದಂತಹ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಬೈಲ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಜನರು ಹಂಚಿಕೊಳ್ಳುವ ಆಕರ್ಷಕ ಜೀವನಶೈಲಿಯನ್ನು ನೋಡಿ ಅನೇಕರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಬಾಬಾ ವಂಗಾ ಅವರ ಈ ಭವಿಷ್ಯವಾಣಿಯು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಮಿತಿಗೊಳಿಸುವ ಸಮಯ ಇದೀಗ ಬಂದಿದೆಯೇ ಎಂಬ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ‘ಡಿಜಿಟಲ್ ಡಿಟಾಕ್ಸ್’ ಎಂಬ ಪರಿಕಲ್ಪನೆಯು ಈಗೀಗ ಜನಪ್ರಿಯವಾಗುತ್ತಿದ್ದು, ಇದರರ್ಥ ಅಗತ್ಯವಿದ್ದಾಗ ಮಾತ್ರ ಸೀಮಿತ ಸಮಯದವರೆಗೆ ತಂತ್ರಜ್ಞಾನವನ್ನು ಬಳಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read