ಬಾಗಲಕೋಟೆ : ಹೃದಯಾಘಾತದಿಂದ ಪತಿ ಮೃತಪಟ್ಟಿದ್ದು, ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
ಪತಿ ಶಶಿಧರ್ ಪತ್ತಾರ (40) ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಸರೋಜಗೆ (35) ಕೂಡ ಹೃದಯಾಘಾತವಾಗಿದ್ದು, ಅವರು ಕೂಡ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೃದಯಾಘಾತ ಆದಾಗ ಏನು ಮಾಡಬೇಕು..?
ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು ಹೃದಯಾಘಾತದ ಪ್ರಕರಣಗಳಲ್ಲಿ ಗೋಲ್ಡನ್ ಅವರ್ ಏಕೆ ಮುಖ್ಯ.! ತಿಳಿಯಿರಿ ತೀವ್ರ ಹೃದಯಾಘಾತದ ಪ್ರಕರಣಗಳಲ್ಲಿ ಗೋಲ್ಡನ್ ಅವರ್ ಏಕೆ ಮುಖ್ಯ?
- ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ.
 - ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.
 - #STEMI ಉಪಕ್ರಮವು ಪ್ರಾಣಾಪಾಯವನ್ನು 80% ತಡೆಯುತ್ತದೆ.
 - ತಕ್ಷಣದ ಇಸಿಜಿ ಮತ್ತು ಟೆನೆಸ್ಟೆಪ್ಲೇಸ್ ಚುಚ್ಚುಮದ್ದು (ರಕ್ತಹೆಪ್ಪುಗಟ್ಟುವಿಕೆ ಕರಗಿಸಲು) ಜೀವ ಉಳಿಸಲು ಸಹಕಾರಿಯಾಗುತ್ತದೆ.
 
CPR ನ 3 C ಗಳನ್ನು ನೆನಪಿಟ್ಟುಕೊಳ್ಳಿ..!
CHECK (ಪರಿಶೀಲಿಸಿ) : ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ.
CALL (ಕರೆ ಮಾಡಿ) : ಆಂಬುಲೆನ್ಸ್ಗೆ ತಕ್ಷಣವೇ ಕರೆ ಮಾಡಿ.
COMPRESS (ಒತ್ತಿರಿ) : ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ ಸಿಪಿಆರ್ ಪ್ರಾರಂಭಿಸಿ. ಅವರ ಎದೆಯನ್ನು 30 ಬಾರಿ ಒತ್ತಿರಿ ಮತ್ತು ವೈದ್ಯಕೀಯ ನೆರವು ಸಿಗುವವರೆಗೂ ನಿಲ್ಲಿಸದಿರಿ
