HomeCrimeViral Video | ಪತ್ನಿಯ ಮೇಲೆ ಪತಿಯ ಮಾರಣಾಂತಿಕ ಹಲ್ಲೆ

Viral Video | ಪತ್ನಿಯ ಮೇಲೆ ಪತಿಯ ಮಾರಣಾಂತಿಕ ಹಲ್ಲೆ

ಮಡದಿಯ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿರುವ ಪತಿಯ ವಿಡಿಯೋವೊಂದು ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಎಟಾವಾ ಪ್ರದೇಶದಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೋಲಿನಿಂದ ತನ್ನ ಮಡದಿಗೆ ಬಾರಿಸುತ್ತಿದ್ದು, ಆಕೆಯ ಮೇಲೆ ಅನೈತಿಕ ಸಂಬಂಧದ ಆಪಾದನೆ ಮಾಡಿದ್ದಾನೆ.

ಘಟನೆಯನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ಈತನಿಗೆ ತನ್ನ ಕೃತ್ಯದ ಬಗ್ಗೆ ಸ್ವಲ್ಪವೂ ವಿಷಾದವಿದ್ದಂತೆ ಕಂಡುಬಂದಿಲ್ಲ. ತನ್ನ ಮಡದಿಯ ಜುಟ್ಟು ಹಿಡಿದ ಈತ, ಆಕೆಗೆ ಮನಬಂದಂತೆ ಥಳಿಸಿದ್ದಾನೆ. ವಿಪರೀತ ಹಿಂಸಾಚಾರದ ನೋವು ತಾಳಲಾರದ ಆಕೆ ಜೋರಾಗಿ ಕೂಗಿಕೊಂಡಿದ್ದು ತನ್ನನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನ್ಯ ಪುರುಷನೊಂದಿಗೆ ಸಂವಹನ ನಡೆಸಿದ ವಿಚಾರವಾಗಿ ತನ್ನ ಪತಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನದ ನಡುವೆಯೇ ಆತ ಈಕೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾನೆ. ಪತಿಯ ಈ ಅಮಾನುಷ ವರ್ತನೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು, ಎಟಾವಾ ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಘಟನೆ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಬರುವ ಬಾಕೇವಾರ್‌ ಪೊಲೀಸ್ ಠಾಣೆಗೆ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಎಟಾವಾ ಪೊಲೀಸರು ತಿಳಿಸಿದ್ದಾರೆ.

https://twitter.com/HateDetectors/status/1665673552266252288?ref_src=twsrc%5Etfw%7Ctwcamp%5Etweetembed%7Ctwterm%5E1665673552266252288%7Ctwgr%5Eb9af83fceddb490bd128aa356c79065de4d3fb9a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-exposes-horrifying-domestic-violence-incident-in-etawah-uttar-pradesh

 

For Latest News Updates, Join Our Whatsapp Community🚩
RELATED ARTICLES

Most Popular