HomeKarnatakaಪ್ರಿಯಕರನ ಜೊತೆ ಸೇರಿ ರುಬ್ಬುವ ಕಲ್ಲು ಎತ್ತಿಹಾಕಿ ಪತಿಯನ್ನು ಕೊಂದ ಪತ್ನಿ

ಪ್ರಿಯಕರನ ಜೊತೆ ಸೇರಿ ರುಬ್ಬುವ ಕಲ್ಲು ಎತ್ತಿಹಾಕಿ ಪತಿಯನ್ನು ಕೊಂದ ಪತ್ನಿ

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಂದಿರುವ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.

ವೆಂಕಟ್ ನಾಯಕ್ (30) ಮೃತ ವ್ಯಕ್ತಿ. ವೆಂಕಟ್ ನಾಯಕ್ ಪತ್ನಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಮನೆಯಲ್ಲಿಯೇ ಪತಿಯನ್ನು ಹತ್ಯೆ ಮಾಡಿದ್ದಳು.

ಪತಿ ಹತ್ಯೆಗೆ ಸಂಚು ರೂಪಿಸಿದ್ದ ನಂದಿನಿಬಾಯಿ ತನ್ನ ಪತಿ ಮನೆಯಲ್ಲಿ ಇಲ್ಲ ಎಂದು ಆಂಧ್ರದಿಂದ ಪ್ರಿಯಕರ ನಿತೀಶ್ ನನ್ನು ಹೆಚ್.ಎಸ್.ಆರ್.ಲೇಔಟ್ ಮನೆಗೆ ಕರೆಸಿಕೊಂಡಿದ್ದಳು. ಆದರೆ ವೆಂಕಟ್ ನಾಯಕ್ ಏಕಾಏಕಿ ಮನೆಗೆ ವಾಪಾಸ್ ಆಗಿದ್ದ. ತನ್ನ ಪತ್ನಿ ಜೊತೆ ಮನೆಯಲ್ಲಿ ಬೇರೊಬ್ಬ ಸಲುಗೆಯಿಂದ ಇರುವುದು ಕಂಡು ಕೋಪಗೊಂಡಿದ್ದ ವೆಂಕಟ್ ಗಲಾಟೆ ಮಾಡಿದ್ದ. ಪತಿ-ಪತ್ನಿ ನಡುವೆ ಜಗಳ ತಾರಕ್ಕೇರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂದಿನಿ ಹಾಗೂ ಆಕೆ ಪ್ರಿಯಕರ ನಿತೀಶ್ ಇಬ್ಬರು ಸೇರಿ ರುಬ್ಬುವ ಕಲ್ಲನ್ನು ವೆಂಕಟ್ ತಲೆ ಮೇಲೆ ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದೀಗ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular