HomeIndiaಪತ್ನಿಯನ್ನು ಕೊಲೆಗೈದು ರುಂಡ ಕೈಯಲ್ಲಿ ಹಿಡಿದು ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್

ಪತ್ನಿಯನ್ನು ಕೊಲೆಗೈದು ರುಂಡ ಕೈಯಲ್ಲಿ ಹಿಡಿದು ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್

ಪಾಟ್ನಾ: ಪತಿ ಮಹಾಶಯನೊಬ್ಬ ಪತ್ನಿಯನ್ನು ಕೊಲೆಗೈದು ರುಂಡ ಕತ್ತರಿಸಿ ರುಂಡವನ್ನು ಕೈಯಲ್ಲಿ ಹಿಡಿದು ಊರತುಂಬ ಓಡಾಡುತ್ತಿದ್ದ ಘಟನೆ ಬಿಹಾರದ ಮಾಧೇಪುರದ ಶ್ರೀನಗರ ಪೊಖಾರಿಯಾದಲ್ಲಿ ನಡೆದಿದೆ.

ಪತ್ನಿಯ ರಕ್ತಸಿಕ್ತ ರುಂಡದ ಬ್ಯಾಗ್ ನ್ನು ಹಿಡಿದು ಊರಲ್ಲಿ ಓಡಾಡುತ್ತಿದ್ದ ವ್ಯಕ್ತಿ ಪೊಲೀಸ್ ಠಾಣೆಯತ್ತ ಬರುತ್ತಿದ್ದ ಎನ್ನಲಾಗಿದೆ. ಆತ ಹಿಡಿದಿದ್ದ ಬ್ಯಾಗ್ ನಿಂದ ರಕ್ತ ಸುರಿಯುತ್ತಿತ್ತು. ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನಲ್ಲಿ ಮಹಿಳೆ ರುಂಡವಿರುವುದನ್ನು ಕಂಡು ಪೊಲಿಸರು ಶಾಕ್ ಆಗಿದ್ದಾರೆ.

ಪೂಜಾದೇವಿ ಕೊಲೆಯಾಗಿರುವ ಮಹಿಳೆ. ಪತ್ನಿ ಪೂಜಾದೇವಿಯ ಮೇಲಿನ ಅನುಮಾನದಿಂದ ಆಕೆಯ ಕತ್ತು ಸೀಳಿ ಪತಿ ಅರ್ಜುನ್ ಕೊಲೆಗೈದಿದ್ದಾನೆ. ಬಳಿಕ ರುಂಡ ಕತ್ತರಿಸಿ ಕೈಯಲ್ಲಿ ಹಿಡಿದು ಊರಲ್ಲೆಲ್ಲ ಓಡಾಡಿದ್ದಾನೆ. ಸದ್ಯ ಆರೋಪಿ ಅರ್ಜುನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಮನೆಯಲ್ಲಿದ್ದ ಆಯುಧ, ಪೆಟ್ಟಿಗೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಎಸ್ ಪಿ ಮನೋಜ್ ಮೋಹನ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular