
ಇಂತಹದೊಂದು ಘಟನೆ ಅಸ್ಸಾಂನ ಉದಲಗರಿ ಜಿಲ್ಲೆಯಲ್ಲಿ ನಡೆದಿದ್ದು, ಪ್ರದೀಪ್ ರಬಾ ಎಂಬಾತ ತನ್ನ ಪತ್ನಿ ಪ್ರತಿಮಾ ರಬಾ ಹಾಗೂ ಆಕೆಯ ಪ್ರಿಯಕರ ಪ್ರಣಾಬ್ ರಬಾ ಅಲಿಯಾಸ್ ಬಾಬು ಎಂಬಾತನಿಂದ ಹತ್ಯೆಯಾಗಿದ್ದಾರೆ.
ಪ್ರದೀಪ್ ರಬಾ ಸಾವನಪ್ಪಿದ ಬಳಿಕ ಆತನ ನೆರೆಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಕಲಂ ಗಳ ಅಡಿ ಪ್ರಕರಣ ದಾಖಲಿಸಿ ಅವರುಗಳನ್ನು ಬಂಧಿಸಿದ್ದಾರೆ.

