HomeLatest NewsBIG NEWS: ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತಿ ಆತ್ಮಹತ್ಯೆ

BIG NEWS: ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತಿ ಆತ್ಮಹತ್ಯೆ

ತುಮಕೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ.

ಪತ್ನಿ ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಮರ್ಯಾದೆಗೆ ಹೆದರಿ ಪತಿ ದೇವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. 18 ವರ್ಷಗಳ ಹಿಂದೆ ದೇವರಾಜ್, ಮಾಧವಿ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗೆ 16 ವರ್ಷದ ಹಾಗೂ 12 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದರೂ ಪತಿ ಹಾಗೂ ಮಕ್ಕಳಿಬ್ಬರನ್ನು ಬಿಟ್ಟು ಮಾಧವಿ ಪ್ರಿಯಕರ ಆನಂದ್ ಕುಮಾರ್ ಎಂಬಾತನ ಜೊತೆ ಓಡಿ ಹೋಗಿದ್ದಾಳೆ.

ದೇವರಾಜ್ ಹೊಸಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಆನಂದ್ ಕುಮಾರ್ ಎಂಬಾತ ಪ್ರತಿದಿನ ಅಂಗಡಿ ಬಳಿ ಬರುತ್ತಿದ್ದ. ಈ ವೇಳೆ ಮಾಧವಿ ಜೊತೆ ಸಲುಗೆ ಬೆಳಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಪತಿ ಹಾಗೂ ಮಕ್ಕಳನ್ನು ತೊರೆದು ಮಾಧವಿ ಆನಂದ್ ಜೊತೆ ಹೋಗಿದ್ದಾಳೆ. ಇದರಿಂದ ತೀವ್ರವಾಗಿ ಮನನೊಂದಿದ್ದ ದೇವರಾಜ್ ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ್ಮಹತ್ಯೆಗೂ ಮುನ್ನ ದೇವರಾಜ್ ಡೆತ್ ನೋಟ್ ಬರೆದಿಟ್ಟಿದ್ದು, ಹೆಂಡತಿಯನ್ನು ಓಡಿಸಿಕೊಂಡು ಹೋದ ವ್ಯಕ್ತಿ ಆನದ್ ನಿಂದ ಧಮ್ಕಿ ಹಾಕಲಾಗಿದೆ. ಜೀವ ಬೆದರಿಕೆ ಹಾಕಿದ್ದಾನೆ. ಆನಂದ್ ಹಾಗೂ ಮಾಧವಿ ಇಬ್ಬರಿಗೂ ಶಿಕ್ಷೆ ನೀಡುವಂತೆ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ತುಮಕೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಆನಂದ್ ಹಾಗು ಮಾಧವಿ ನಾಪತ್ತೆಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular