HomeLatest NewsSHOCKING: ಪತಿಯ ಮೇಲೆ ಕಾದ ಎಣ್ಣೆ, ಮೆಣಸಿನ ಪುಡಿ ಎರಚಿದ ಗರ್ಭಿಣಿ ಪತ್ನಿ

SHOCKING: ಪತಿಯ ಮೇಲೆ ಕಾದ ಎಣ್ಣೆ, ಮೆಣಸಿನ ಪುಡಿ ಎರಚಿದ ಗರ್ಭಿಣಿ ಪತ್ನಿ

ನವದೆಹಲಿ: ಮಲಗಿದ್ದ ಪತಿಯ ಮೇಲೆ ಗರ್ಭಿಣಿ ಪತ್ನಿ ಕಾದ ಎಣ್ಣೆ ಹಾಗೂ ಮೆಣಸಿನ ಪುಡಿ ಎರಚಿರುವ ಘಟನೆ ದೆಹಲಿಯ ಮಂದಗೀರ್ ಪ್ರದೇಶದಲ್ಲಿ ನಡೆದಿದೆ.

ರಾತ್ರಿ ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ, ಖಾರದ ಪುಡಿ ಎರಚಿದ್ದಾಳೆ. ಪತಿ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ದಿನೇಶ್ ಎಂದು ಗುರುತಿಸಲಾಗಿದೆ. ಆತನ ಕಿರುಚಾಟಕ್ಕೆ ಅಕ್ಕ-ಪಕ್ಕದ ಮನೆಯವರು ಬಂದು ಬಾಗಿಲು ಬಡಿದಿದ್ದಾರೆ. ಆದರೂ ಬಾಗಿಲು ತೆರೆದಿಲ್ಲ.

ಪತ್ನಿಯ ಈ ಕೃತ್ಯಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular