ʼಸಲಾರ್ʼ ಚಿತ್ರದ ನಂತರ ಪ್ರಭಾಸ್ ನಟನೆಯಿಂದಲೇ ದೂರವಿರುವುದೇಕೆ ? ಇದರ ಹಿಂದಿದೆ ಈ ಕಾರಣ

ಸೂಪರ್‌ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್ ಪಾರ್ಟ್‌ 1: ಸೀಸ್‌ಫೈರ್‌’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಆದರೆ ಈ ಚಿತ್ರದ ಬಳಿಕ ನಟ ಪ್ರಭಾಸ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಸಲಾರ್ ನಂತರ  ‘ಕಲ್ಕಿ 2898 AD’ ಚಿತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆತುರಾತುರವಾಗಿ ಅವರು ಸಿನೆಮಾ ಶೂಟಿಂಗ್‌ಗೆ ತೆರಳಿಲ್ಲ. ವರದಿಗಳ ಪ್ರಕಾರ ಪ್ರಭಾಸ್‌ ಆಕ್ಟಿಂಗ್‌ನಿಂದಲೇ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ತಿದ್ದಾರೆ.

ಅಭಿಮಾನಿಗಳಿಗೆ ನಿಜಕ್ಕೂ ಇದು ಶಾಕಿಂಗ್ ನ್ಯೂಸ್. ಪ್ರಭಾಸ್ ನಟನೆಯಿಂದ ದೂರ ಉಳಿದಿರುವುದಕ್ಕೆ ಕೆಲವು ಆರೋಗ್ಯ ಸಮಸ್ಯೆಗಳೇ ಕಾರಣ ಎನ್ನಲಾಗುತ್ತಿದೆ. ‘ಸಲಾರ್’ ಚಿತ್ರದ ಯಶಸ್ಸಿನಿಂದ ಪ್ರಭಾಸ್‌ ಫುಲ್‌ ಖುಷಿಯಾಗಿದ್ದಾರೆ. ಹೊಸ ಚಿತ್ರಗಳಲ್ಲಿ ತೊಡಗಿಕೊಳ್ಳುವ ಬದಲು ಮನಸ್ಸು ಮತ್ತು ಕೌಶಲ್ಯಗಳನ್ನು ರಿಫ್ರೆಶ್ ಮಾಡಲು ಮುಂದಾಗಿದ್ದಾರೆ. ಮಾರ್ಚ್ ವೇಳೆಗೆ ಪ್ರಭಾಸ್‌ ಶೂಟಿಂಗ್‌ಗೆ ಮರಳುವ ಸಾಧ್ಯತೆ ಇದೆ.

ಪ್ರಭಾಸ್‌ರ ಮುಂದಿನ ಚಿತ್ರ ಕಲ್ಕಿ 2898 ADಯನ್ನು ಬಾಹುಬಲಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಮಾಳವಿಕಾ ಮೋಹನ್, ನಿಧಿ ಅಗರ್ವಾಲ್ ಸೇರಿದಂತೆ ಹಲವು ತಾರೆಯರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ‘ರಾಜಾ ಸಾಬ್’, ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಮತ್ತು ‘ಸಾಲಾರ್ ಪಾರ್ಟ್‌ 2’ ಕೂಡ ಪ್ರಭಾಸ್‌ರ ಬಕೆಟ್‌ ಲಿಸ್ಟ್‌ನಲ್ಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read