ಪಾಕಿಸ್ತಾನ ಬೆಂಬಲಿಸಲು ಸಿಎಂ, ಡಿಸಿಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ರಾ..? : ಮಾಜಿ ಸಿಎಂ ‘HDK’ ಗರಂ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಆಸ್ಟ್ರೇಲಿಯಾ – ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಾರೆ.

ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದು, ನೀವು ಯಾರನ್ನು ಬೆಂಬಲಿಸಲು ಹೋಗಿದ್ರಿ..? ಎಂದು ಸಿಎಂ ಹಾಗೂ ಹಾಗೂ ಡಿಸಿಎಂಗೆ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ‘ನಿನ್ನೆ ಟೀಮ್ ಇಂಡಿಯಾ ಪಂದ್ಯ ನಡೆದಿದ್ದರೆ ನೀವು ನಮ್ಮ ಭಾರತದ ಆಟಗಾರರ ಪಂದ್ಯ ವೀಕ್ಷಿಸಲು ಹೋಗಿದ್ರಿ ಎಂದು ಖುಷಿ ಪಡುತ್ತಿದ್ದೆವು. ಆದರೆ ನೀವು ನಿನ್ನೆ ಆಸ್ಟ್ರೇಲಿಯಾ-ಪಾಕ್ ಪಂದ್ಯ ವೀಕ್ಷಿಸಲು ಹೋಗಿದ್ರಿ..? ನೀವು ಆಸ್ಟೇಲಿಯಾಗೆ ಸಪೋರ್ಟ್ ಮಾಡಲು ಹೋಗಿದ್ರೋ..? ಅಥವಾ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಹೋಗಿದ್ರೋ..? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದರೆ ನೀವು ಮ್ಯಾಚ್ ನೋಡಿ ಮಜಾ ಮಾಡಲು ಹೋಗಿದ್ದೀರಾ ಎಂದು ಗರಂ ಆಗಿದ್ದಾರೆ.ವಿಶ್ವಕಪ್ ಪಂದ್ಯ ನೋಡಲು ಹೋಗಿದ್ದು ತಪ್ಪೆನ್ನುತ್ತಿಲ್ಲ. ಭಾರತ ತಂಡದ ಪಂದ್ಯ ಇದ್ದಿದ್ದು ಅದನ್ನು ನೋಡಲು ಹೋಗಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು   ಎಂದು ಸಿಎಂ ಹಾಗೂ ಹಾಗೂ ಡಿಸಿಎಂಗೆ ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ಸಂಜೆ 7.30 ಸುಮಾರಿಗೆ ಸ್ಟೇಡಿಯಂಗೆ ತೆರಳಿದ ಸಿಎಂ ಹಾಗೂ ಡಿಸಿಎಂ ಕೆಲ ಹೊತ್ತು ಅಕ್ಕಪಕ್ಕ ಕುಳಿತು ಕ್ರಿಕೆಟ್ ಪಂದ್ಯವನ್ನು ನೋಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಸಚಿವ ಭೈರತಿ ಸುರೇಶ್, ಎಂ.ಸಿ ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದ ರಾಜ್, ನಸೀರ್ ಅಹ್ಮದ್ ಸಾಥ್ ನೀಡಿದರು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read