ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ ಕೂಡ ಪಟ್ಟುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ತನ್ನ ದ್ವಿಚಕ್ರ ವಾಹನವನ್ನು ನದಿಯಲ್ಲಿ ಚಲಾಯಿಸುತ್ತಿರುವುದನ್ನು ನೋಡಬಹುದು.
ಟ್ವಿಟರ್ ಹ್ಯಾಂಡಲ್ ಮೋಟಾರ್ ಆಕ್ಟೇನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸಿ, ಮರದ ಹಲಗೆಯ ಮೇಲೆ ವಾಹನವನ್ನು ಶುರು ಮಾಡಿ ನಂತರ ನೀರಿನ ಮೇಲೆ ಓಡಿಸುತ್ತಿರುವುದನ್ನು ತೋರಿಸುತ್ತದೆ. ಅವನು ಆಕಸ್ಮಿಕವಾಗಿ ಸೇತುವೆಯ ಕಡೆಗೆ ಹೋಗುತ್ತಾನೆ ಮತ್ತು ನೀರಿನ ಮೇಲೆ ತಿರುಗುವುದನ್ನು ನೋಡಬಹುದು.
ಇಚ್ಛೆಯಿರುವಲ್ಲಿ ಒಂದು ಮಾರ್ಗವಿದೆ ಎಂಬುದಕ್ಕೆ ಪರಿಪೂರ್ಣ ಉದಾಹರಣೆ ಎಂದು ಹಲವರು ಹೇಳುತ್ತಿದ್ದರೆ, ಇದು ಜೀವಕ್ಕೆ ಕುತ್ತು ತರುವ ಅಪಾಯಕಾರಿ ವಿಧಾನ ಎಂದು ಇನ್ನು ಕೆಲವರು ಬರೆದಿದ್ದಾರೆ.
https://twitter.com/MotorOctane/status/1643988014878818306?ref_src=twsrc%5Etfw%7Ctwcamp%5Etweetembed%7Ctwterm%5E1643988014878818306%7Ctwgr%5Ea9290352a6feaa7a7d1667aa7b628e75290f126c%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fman-seen-riding-motorcycle-on-water-body-8545515%2F