ರೈಲಿನ ಮಾಲೀಕನಾಗಿದ್ದ ಪಂಜಾಬಿನ ಈ ರೈತ….! ಈ ಘಟನೆ ನಡೆದಿದ್ದರ ಹಿಂದಿದೆ ‘ಇಂಟ್ರೆಸ್ಟಿಂಗ್’ ಸ್ಟೋರಿ

ಭಾರತದಲ್ಲಿ ರೈಲುಗಳು ಜನರ ಜೀವಾಳ. ಪ್ರತಿ ದಿನ ಕೋಟ್ಯಾಂತರ ಮಂದಿ ಇದ್ರಲ್ಲಿ ಓಡಾಡ್ತಾರೆ. ದೇಶದಲ್ಲಿ ಎಷ್ಟೇ ಶ್ರೀಮಂತ ವ್ಯಕ್ತಿ ಇರಲಿ ಆತ ಭಾರತೀಯ ರೈಲನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬ ರೈತ ಭಾರತೀಯ ರೈಲಿನ ಮಾಲೀಕನಾಗಿದ್ದ. ಇದು 21ನೇ ಶತಮಾನದಲ್ಲಿಯೇ ನಡೆದ ಘಟನೆ. ಪಂಜಾಬ್ ನ ರೈತನೊಬ್ಬ ರೈಲ್ವೆ ಇಲಾಖೆ ತಪ್ಪಿನಿಂದ ಇಡೀ ಶತಾಬ್ದಿ ಎಕ್ಸ್ ಪ್ರೆಸ್ ನ ಮಾಲೀಕನಾದ.

ಸಂಪೂರಣ್ ಸಿಂಗ್ ರೈಲಿನ ಮಾಲೀಕನಾದ ರೈತ. ಆತ ಲುಧಿಯಾನಾದ ಕಟಾನಾ ಗ್ರಾಮದ ನಿವಾಸಿ. 2007 ರಲ್ಲಿ ಲುಧಿಯಾನ-ಚಂಡೀಗಢ ರೈಲು ಮಾರ್ಗವನ್ನು ನಿರ್ಮಿಸಲು ರೈತರ ಭೂಮಿಯನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ರೈತರಿಗೆ ತಾರತಮ್ಯ ನಡೆದಿತ್ತು. ಒಬ್ಬರಿಗೆ 25 ಲಕ್ಷ ಇನ್ನೊಬ್ಬರಿಗೆ 71 ಲಕ್ಷ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಂಪೂರಣ್ ಸಿಂಗ್ ಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಕೋರ್ಟ್‌, ಸಂಪೂರಣ್‌ ಸಿಂಗ್‌ ಗೆ ಮೊದಲು 50 ಲಕ್ಷ ನಂತ್ರ 1.5 ಕೋಟಿ ನೀಡುವಂತೆ ಆದೇಶ ನೀಡಿತು.

ಅಲ್ಲದೆ ಅವರನ್ನು ಶತಾಬ್ದಿ ಎಕ್ಸ್ ಪ್ರೆಸ್ ನ ಮಾಲೀಕರನ್ನಾಗಿ ಮಾಡಿತ್ತು. 2015ರೊಳಗೆ ಪರಿಹಾರ ನೀಡುವಂತೆ ಕೋರ್ಟ್‌ ಆದೇಶ ನೀಡಿದ್ರೂ ರೈಲ್ವೆ ಇಲಾಖೆ ಹಣ ಪಾವತಿ ಮಾಡಿರಲಿಲ್ಲ ಹಾಗಾಗಿ ಕೋರ್ಟ್‌ 2017ರಲ್ಲಿ ಲುಧಿಯಾನಾ ಸ್ಟೇಷನ್‌ ಕೂಡ ಸಂಪೂರಣ್‌ ಸಿಂಗ್‌ ಗೆ ನೀಡಿತ್ತು. ಕೋರ್ಟ್‌ ಆದೇಶದ ನಂತ್ರ ವಕೀಲರ ಜೊತೆ ಸಂಪೂರಣ್‌ ಸಿಂಗ್‌, ರೈಲನ್ನು ವಶಕ್ಕೆ ಪಡೆಯಲು ನಿಲ್ದಾಣಕ್ಕೆ ಬಂದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read