ಹೊಸ ಕೆಲಸವನ್ನು ಪ್ರಾರಂಭಿಸುವಾಗ ಈ ʼವಾಸ್ತು ನಿಯಮʼ ಗಳನ್ನು ತಪ್ಪದೆ ಪಾಲಿಸಿ

ಹಣ ಸಂಪಾದಿಸಲು ಮತ್ತು ನೆಮ್ಮದಿಯ ಜೀವನ ನಡೆಸಲು ಕಷ್ಟಪಟ್ಟು ಕೆಲಸ ಮಾಡಲೇಬೇಕು. ಕೆಲವೊಮ್ಮೆ ಎಷ್ಟೇ ಶ್ರಮ ಹಾಕಿದರೂ ಅದಕ್ಕೆ ತಕ್ಕ ಪ್ರತಿಫಲ, ಯಶಸ್ಸು ಸಿಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಜನರು ಉದ್ಯೋಗವನ್ನೇ ಬದಲಾಯಿಸಬೇಕಾಗುತ್ತದೆ. ಅಥವಾ ಬೇರೆ ಯಾವುದಾದರೂ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ. ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಯಶಸ್ಸು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೂಡ ಅವರ  ಮನಸ್ಸಿನಲ್ಲಿರುತ್ತವೆ.

ಹೊಸ ಕೆಲಸವನ್ನು ಪ್ರಾರಂಭಿಸುವಾಗ ಅನೇಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಸ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದೆನಿಸಿದರೆ ವಾಸ್ತು ನಿಮಯಗಳನ್ನು ಪಾಲಿಸದೇ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಹಾಗಾಗಿ ಹೊಸ ಕೆಲಸವನ್ನು ಪ್ರಾರಂಭಿಸುವಾಗ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು.

ಹೊಸ ಕೆಲಸದ ಅಥವಾ ಕಂಪನಿಯ ಮಾಲೀಕ ನೀವಾಗಿದ್ದರೆ ಕುಳಿತುಕೊಳ್ಳುವ ದಿಕ್ಕು ಬಹಳ ಮುಖ್ಯ. ಬಾಸ್ ಅಥವಾ ಮಾಲೀಕರು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು. ಇದು ಕೆಲಸದಲ್ಲಿ ಸ್ಥಿರತೆ ಮತ್ತು ಯಶಸ್ಸನ್ನು ತರುತ್ತದೆ.

ಕೆಲಸದ ಸ್ಥಳದಲ್ಲಿ ನೀವು ನೀರಿನ ಕಾರಂಜಿ ಅಥವಾ ಫಿಶ್‌ ಅಕ್ವೇರಿಯಂ ಅನ್ನು ಇಡಬೇಕು. ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ಸೂಕ್ತ. ಅಕ್ವೇರಿಯಂನಲ್ಲಿ ಕಪ್ಪು ಮೀನುಗಳಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಕೆಲಸದಲ್ಲಿ ಪ್ರಗತಿಯನ್ನು ತರುತ್ತದೆ.

ಅನೇಕರು ಕೆಲವು ಪ್ರಮುಖ ವಿಷಯಗಳನ್ನು ಟಿಪ್ಪಣಿಗಳಲ್ಲಿ ಬರೆದು ಗೋಡೆ ಅಥವಾ ಕಂಪ್ಯೂಟರ್‌ನಲ್ಲಿ ಅಂಟಿಸಿಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ತಪ್ಪಿಸಬೇಕು. ಇದು ಕೆಲಸದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.

ಹೊಸ ಕೆಲಸವನ್ನು ಪ್ರಾರಂಭಿಸುವಾಗ ಅಥವಾ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ನಿಮ್ಮ ಮುಖವು ಯಾವ ದಿಕ್ಕಿನಲ್ಲಿರಬೇಕು ಎಂಬುದು ಬಹಳ ಮುಖ್ಯ. ನಿಮ್ಮ ಮುಖವು ಉತ್ತರ ದಿಕ್ಕಿನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಶ್ರೇಯಸ್ಸು ಸಿಗುತ್ತದೆ. ಈ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಣದ ವ್ಯವಹಾರವನ್ನು ಉತ್ತರ ದಿಕ್ಕಿನಲ್ಲಿ ಮಾಡುವುದು ಮಂಗಳಕರ.

ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಎಲ್ಲಾ ಕುರ್ಚಿಗಳು ಮತ್ತು ಮೇಜುಗಳು ಸಂಪೂರ್ಣವಾಗಿ ಸ್ವಚ್ಛವಾಗಿಡಬೇಕು. ಕೆಲವೊಮ್ಮೆ ಟೀ-ಕಾಫಿಯ ಕಲೆಗಳು ಕುರ್ಚಿ ಮತ್ತು ಮೇಜಿನ ಮೇಲೆ ಉಳಿಯುತ್ತವೆ. ತಕ್ಷಣ ಈ ಕಲೆಗಳನ್ನು ಸ್ವಚ್ಛಗೊಳಿಸಬೇಕು. ಕೊಳಕು ಕುರ್ಚಿ ಮತ್ತು ಮೇಜುಗಳು ನಕಾರಾತ್ಮಕತೆಯನ್ನು ಸೃಷ್ಟಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read