ರಾಜಕಾರಣಿ ಹೇಗಿರಬೇಕು ಎಂದು ಶಾರುಖ್ ಗೆ ಪ್ರಶ್ನಿಸಿದ ರಾಹುಲ್…! ಹಳೆ ವಿಡಿಯೋ ವೈರಲ್​

ಶಾರುಖ್ ಖಾನ್ ಮತ್ತು ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಶಾರುಖ್​ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು.

ಅಲ್ಲಿ ರಾಹುಲ್ ಗಾಂಧಿ ರಾಜಕಾರಣಿಗಳಿಗೆ ಏನಾದರೂ ಸಲಹೆಗಳಿವೆಯೇ ಎಂದು ನಟನನ್ನು ಕೇಳಿದ್ದಾರೆ. “ರಾಜಕಾರಣಿಗಳಿಗೆ ನೀವು ನೀಡುವ ಒಂದು ಸಲಹೆ ಏನು ? ಎಂದು ಕೇಳಿದ್ದಾರೆ.

ಆಗ ಶಾರುಖ್ ಅವರು ತಮ್ಮ ಹಾಸ್ಯದ ಮಾತುಗಳಿಂದ, “ಇದು ತುಂಬಾ ಸರಳವಾದ ಪ್ರಶ್ನೆಯಾಗಿದೆ. ನೋಡಿ ನಾನು ಸುಳ್ಳು ಹೇಳುತ್ತೇನೆ, ಮೋಸ ಮಾಡುತ್ತೇನೆ, ಜೀವನಕ್ಕಾಗಿ ಮೋಸದ ಮಾತನಾಡುತ್ತೇನೆ. ಏಕೆಂದರೆ ನಾನೊಬ್ಬ ನಟ. ಜನರಿಗಾಗಿ ಏನು ಬೇಕಾದರೂ ಸುಳ್ಳು ಹೇಳಿ ನಟನೆ ಮಾಡಬಹುದು. ಆದರೆ ರಾಜಕಾರಣಿಗಳು, ಹಾಗೆ ಮಾಡಬಾರದು. ಅವರು ದೇಶವನ್ನು ಮುನ್ನಡೆಸುವವರು. ಇದು ಅತ್ಯಂತ ನಿಸ್ವಾರ್ಥ ಸೇವೆ” ಎಂದಿದ್ದಾರೆ.

ರಾಜಕಾರಣಿಗಳು ಮೇಜಿನ ಕೆಳಗೆ ಹಣವನ್ನು ತೆಗೆದುಕೊಳ್ಳಬಾರದು, ನನ್ನ ಸಲಹೆಯೆಂದರೆ ದಯವಿಟ್ಟು ಸಾಧ್ಯವಾದಷ್ಟು ನೈಜವಾಗಿ ಪ್ರಾಮಾಣಿಕವಾಗಿರಿ ಎಂದಿದ್ದಾರೆ. ಇದೀಗ ಭಾರಿ ವೈರಲ್ ಆಗುತ್ತಿದೆ. ಆದರೆ ಇಂಥ ರಾಜಕಾರಣಿಗಳನ್ನು ಟಾರ್ಚ್​ ಹಾಕಿ ಹುಡುಕಬೇಕಿದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

https://twitter.com/srkvibe/status/1646547695316914179?ref_src=twsrc%5Etfw%7Ctwcamp%5Etweetembed%7Ctwterm%5E164654769531691417

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read