HomeKarnatakaಬೈಕ್ ಕದ್ದು ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್...!

ಬೈಕ್ ಕದ್ದು ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್…!

ಬೆಂಗಳೂರು: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯಲು ಬೈಕ್ ಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವ್ಹಿಲಿಂಗ್ ಪುಂಡರ ಹಾವಳಿಗೆ ಬ್ರೀಕ್ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೂ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇಲ್ಲೊಂದು ಪ್ರಕರಣದಲ್ಲಿ ಯಮಹ ಆರ್ ಎಕ್ಸ್ ಬೈಕ್ ಕಳ್ಳತನ ಮಾಡಿ ಮಾಗಡಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಿತಿಕ್ ಹಾಗೂ ಪವನ್ ಬಂಧಿತ ಆರೋಪಿಗಳು. ಇವರು ರಸ್ತೆಬದಿ ನಿಲ್ಲಿಸಿದ್ದ ಯಮಹ ಆರ್ ಎಕ್ಸ್ ಬೈಕ್ ಗಳನ್ನೇ ಹುಡುಕಿ, ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.

ಬಳಿಕ ಕದ್ದ ಬೈಕ್ ನಲ್ಲಿಯೇ ವ್ಹಿಲಿಂಗ್ ಮಾಡಿ, ವಿಡಿಯೋ ತೆಗೆದು ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೊಡ್ ಮಾಡಿ ಪುಂಡಾಟ ಮೆರೆಯುತ್ತಿದ್ದರು. ಪ್ರಕರಣ ಸಂಬಂಧ ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular