HomeEntertainmentʼಶಾಕ್‌ʼ ಆಗಿಸುವಂತಿದೆ ಸೆಲೆಬ್ರಿಟಿಗಳ ಈ ವಿಚಿತ್ರ ಅಭ್ಯಾಸ....!

ʼಶಾಕ್‌ʼ ಆಗಿಸುವಂತಿದೆ ಸೆಲೆಬ್ರಿಟಿಗಳ ಈ ವಿಚಿತ್ರ ಅಭ್ಯಾಸ….!

ಪ್ರತಿಯೊಬ್ಬರಲ್ಲೂ ಇರುವಂತೆ ಸೆಲೆಬ್ರಿಟಿಗಳಲ್ಲೂ ಸಹ ಕೆಲವೊಂದು ವಿಚಿತ್ರ ಅನಿಸಬಹುದಾದ ಅಭ್ಯಾಸಗಳಿರುತ್ತವೆ. ದೇಶದ ಚಿತ್ರರಂಗದ ಅತಿ ದೊಡ್ಡ ಸೆಲೆಬ್ರಿಟಿಗಳ ಇಂತ ಕೆಲವು ವಿಚಿತ್ರ ಅಭ್ಯಾಸಗಳು ಇವು.

ಶಾರುಖ್ ಖಾನ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಚಿತ್ರರಂಗದ ಅತಿ ದೊಡ್ಡ ಸೂಪರ್‌ಸ್ಟಾರ್‌ ಆಗಿರುವ ಶಾರುಖ್ ಖಾನ್‌‌ಗೆ ಪಾದರಕ್ಷೆಗಳ ಮೇಲೆ ಭಾರೀ ವ್ಯಾಮೋಹವಂತೆ. ಪ್ರತಿನಿತ್ಯ ಒಮ್ಮೆಯಾದರೂ ಹಲವಾರು ಶೂಗಳನ್ನು ಬದಲಿಸುವ ಶಾರುಖ್ ಒಮ್ಮೊಮ್ಮೆ ಶೂಗಳನ್ನು ಹಾಕಿಯೇ ಮಲಗುತ್ತಾರಂತೆ.

ಸುಷ್ಮಿತಾ ಸೇನ್

ಮುಕ್ತವಾದ ವಾತಾವರಣದಲ್ಲಿ ಸ್ನಾನ ಮಾಡಬೇಕೆಂಬುದು ಸುಷ್ಮಿತಾ ಸೇನ್‌ರ ಮನದಾಳದ ಇಂಗಿತವಂತೆ. ಬಹುಶಃ ಇದುವೇ ಆಕೆಯ ಸೌಂದರ್ಯದ ಗುಟ್ಟಿರಬೇಕು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಆಮೀರ್‌ ಖಾನ್

ತಮಗೆ ಸ್ನಾನ ಮಾಡಲು ಇಷ್ಟವಿಲ್ಲ ಎಂದು ಮಾಜಿ ಪತ್ನಿ ಕಿರಣ್ ರಾವ್‌ ಜೊತೆಗೆ ’ಕಾಫಿ ವಿತ್‌ ಕರಣ್’ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ಖುದ್ದು ಆಮೀರ್‌ ಖಾನ್ ಹೇಳಿಕೊಂಡಿದ್ದರು.

ಅಮಿತಾಭ್ ಬಚ್ಚನ್

ಎರಡೂ ಕೈಗಳಿಗೆ ಗಡಿಯಾರ ತೊಡುವ ಹವ್ಯಾಸವಿಟ್ಟುಕೊಂಡಿರುವ ಬಿಗ್‌ಬಿ, ಕುಟುಂಬಸ್ಥರೊಂದಿಗೆ ವಿದೇಶಕ್ಕೆ ತೆರಳುವ ವೇಳೆ ಹೀಗೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಬಹುಶಃ ಒಂದು ಗಡಿಯಾರ ಭಾರತೀಯ ಕಾಲಮಾನ ಸಮಯ ತೋರಿದರೆ ಮತ್ತೊಂದು ಅವರು ಪ್ರಯಾಣಿಸುವ ದೇಶದ ಕಾಲಮಾನ ಸಮಯ ತೋರಬಹುದು.

ಜಿತೇಂದ್ರ

ಅತ್ಯಂತ ವಿಚಿತ್ರ ಹವ್ಯಾಸ ಹೊಂದಿರುವ ಜಿತೇಂದ್ರ, ಮಲವಿಸರ್ಜನೆ ಮಾಡುತ್ತಾ ಆಹಾರ ಸೇವಿಸುವ ಅಭ್ಯಾಸ ಹೊಂದಿದ್ದಾರಂತೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ನಮಗೂ ಸ್ಪಷ್ಟವಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular