ಬೇಸಿಗೆಯ ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ ಬದಲು ಹಾಳಾಗುವುದೇ ಹೆಚ್ಚು.

ಕೆಳಗಿನ ಈ ಟಿಪ್ಸ್‌ ಪಾಲಿಸಿದರೆ ಬಿಸಿಲಿನ ಬೇಗೆಗೆ ಬಾಡದೆ ಅಂದವಾಗಿ ಕಾಣಬಹುದು.

ಮೊದಲಿಗೆ ಐಸ್‌ನಿಂದ ಸ್ವಲ್ಪ ಹೊತ್ತು ಮಸಾಜ್‌ ಮಾಡಬೇಕು.

ಲೈಟ್‌ ಮಾಯಿಶ್ಚರೈಸರ್ ಹಚ್ಚಿ ನಂತರ ಮೇಕಪ್ ಮಾಡುವುದರಿಂದ ಬಣ್ಣ ಮೆತ್ತಿದಂತೆ ಕಾಣುವುದಿಲ್ಲ.

ಬೇಸಿಗೆಯಲ್ಲಿ ತುಂಬಾ ಬೆವರುವುದರಿಂದ ವಾಟರ್‌ ಫ್ರೂಫ್‌ ಮೇಕಪ್‌ ಬಳಸುವುದು ಸೂಕ್ತ. ಡಾರ್ಕ್ ಮೇಕಪ್‌ಗಿಂತ ತೆಳು ಮೇಕಪ್‌ ಆಯ್ಕೆ ಮಾಡಬೇಕು.

ತುಂಬಾ ಬೆವರುತ್ತಿದ್ದರೆ ಆಯಿಲ್‌ ಬ್ಲೋಟಿಂಗ್‌ ಶೀಟ್‌ ಬಳಸಬೇಕು.

ಬೇಸಿಗೆಯಲ್ಲಿ ಮುಖಕ್ಕೆ ಪೌಡರ್‌ ಹಚ್ಚದಿದ್ದರೆ ಒಳ್ಳೆಯದು. ಮುಖ ಬೆವರುವುದರಿಂದ ಪೌಡರ್‌ ಮುಖದಲ್ಲಿ ಬಿಳಿ-ಬಿಳಿಯಾಗಿ ಕಾಣುವುದು.

ಮೇಕಪ್‌ ಮಾಡಿದ ಬಳಿಕ ಸೆಟ್ಟಿಂಗ್ ಸ್ಪ್ರೇ ಬಳಸಿ. ಇದು ಬೇಸಿಗೆಯಲ್ಲಿ ನಿಮ್ಮ ಅಂದ ಕಾಪಾಡಲು ಸಹಾಯ ಮಾಡುವುದು.

ತೀರಾ ಗಾಢ ಬಣ್ಣದ ಲಿಪ್ ಸ್ಟಿಕ್ ಬೇಡ. ಆದಷ್ಟು ಮ್ಯಾಟ್ ಫಿನಿಷ್ ಲಿಪ್ ಸ್ಟಿಕ್ ಬಳಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read