ಗಂಡನಿಗೆ ಕುಡಿಸಿ ಹೆಂಡತಿಗೆ ‘ಗ್ಯಾರಂಟಿ’ ಕೊಡುವುದು ಯಾವ ನ್ಯಾಯ..? : ರಾಜ್ಯ ಸರ್ಕಾರದ ವಿರುದ್ಧ H.ವಿಶ್ವನಾಥ್ ವಾಗ್ಧಾಳಿ.!

ಬೆಂಗಳೂರು : ಗಂಡನಿಗೆ ಕುಡಿಸಿ ಹೆಂಡತಿಗೆ ಗ್ಯಾರಂಟಿ ಕೊಡುವುದು ಯಾವ ನ್ಯಾಯ..? ಎಂದು ರಾಜ್ಯ ಸರ್ಕಾರದ ವಿರುದ್ಧ ಎಂ ಎಲ್ ಸಿ ಹೆಚ್.ವಿಶ್ವನಾಥ್ ವಾಗ್ಧಾಳಿ ನಡೆಸಿದರು.

130 ರೂ ಇದ್ದ ಬಿಯರ್ ಬಾಟಲ್ ನ ಬೆಲೆ 270 ಆಗಿದೆ. ಗ್ಯಾರಂಟಿ ಯೋಜನೆ ಕೊಡುವುದರ ಬದಲು 1-10 ಮಕ್ಕಳಿಗೆ ಉಚಿತ ಶಿಕ್ಷಣ ನೀಡಬಹುದಿತ್ತು, ಜನತೆಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬಹುದಿತ್ತು. ಗಂಡನಿಗೆ ಕುಡಿಸಿ ಹೆಂಡತಿಗೆ ಗ್ಯಾರಂಟಿ ಕೊಡುವುದು ಯಾವ ನ್ಯಾಯ..? ನಿಮಗೆ ಗ್ಯಾರಂಟಿ ಕೊಡಿ ಎಂದು ಕೇಳಿದ್ದು ಯಾರು..? ಎಂದು ಗುಡುಗಿದರು.

ದೇವರಾಜು ಅರಸು ಅವರು ಅಕ್ಕಿ ಕೊಡಲಿಲ್ಲ, ಬದಲಿಗೆ ಅಕ್ಕಿ ಬೆಳೆಯುವ ಭೂಮಿ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆ ಒಳ್ಳೆಯದ್ದಲ್ಲ, ಉಪಯೋಗವಿಲ್ಲ ಎಂದರು.
ಕನ್ನಡದ ವಿಚಾರವಾಗಿ ಬರೀ ಸುಮ್ಮನೆ ಮಾತನಾಡುತ್ತಾರೆ. 1 ರಿಂದ 5 ನೇ ತರಗತಿವರೆಗೆ ಕನ್ನಡ ಕಡ್ಡಾಯ ಜಾರಿ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read