HomeBusinessತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ....? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ.

ಆದರೆ ಈ ಎಲ್ಲಾ ಸುಧಾರಣೆಗಳಿಂದ ಅನುಕೂಲ ಇರುವಷ್ಟೇ ಅನಾನುಕೂಲತೆಗಳೂ ಇವೆ ಎಂಬುದು. ಅದರಲ್ಲೂ ಸಾಂಕ್ರಮಿಕದ ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ಆನ್ಲೈನ್ ವ್ಯವಹಾರಗಳ ಮುಖಾಂತರ ನಡೆಯುತ್ತಿವೆ.

ಉದಾಹರಣೆಗೆ: ಯಾರಾದರೂ ಒಬ್ಬರು ತಪ್ಪು ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಲ್ಲಿ, ಈ ವ್ಯವಹಾರವನ್ನು ಹಿಂದಿರುಗಿಸಲು ಫಲಾನುಭವಿಗಳ ಅನುಮತಿ ಇಲ್ಲದೇ ಬ್ಯಾಂಕುಗಳಿಗೆ ಸಾಧ್ಯವಾಗದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈಗ ಇಂಥ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ. ತಪ್ಪಾಗಿ ಹಣ ವರ್ಗಾವಣೆಯಾದ ಕೂಡಲೇ ಆ ವ್ಯಕ್ತಿಯು ಸಂಬಂಧಪಟ್ಟ ಬ್ಯಾಂಕಿನ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ಹಣ ಕಳುಹಿಸುವ ಖಾತೆ, ಫಲಾನುಭವಿಯ ಖಾತೆ, ವ್ಯವಹಾರದ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ತಿಳಿಸುವ ಮೂಲಕ ಎಕ್ಸಿಕ್ಯೂಟಿವ್‌ ಮುಖಾಂತರ ಎಕ್ಸಿಕ್ಯೂಟಿವ್ ಮೂಲಕ ಈ ವ್ಯವಹಾರವನ್ನು ಹಿಂದಿರುಗಿಸಬಹುದಾಗಿದೆ. ಇದಕ್ಕಾಗಿ 5-6 ವ್ಯಾವಹಾರಿಕ ದಿನಗಳು ಹಿಡಿಯಲಿದ್ದು, ನೀವು ವರ್ಗಾವಣೆ ಮಾಡಿದ ಖಾತೆ ಚಾಲ್ತಿಯಲ್ಲಿದ್ದಲ್ಲಿ ನಿಮ್ಮ ಹಣ ತನ್ನಿಂತಾನೇ ಹಿಂದಿರುಗಲಿದೆ.

ನೀವು ದುಡ್ಡು ಕಳುಹಿಸಿದ ಸಂಖ್ಯೆಯ ಖಾತೆ ಚಾಲ್ತಿಯಲ್ಲಿ ಇದ್ದ ವೇಳೆ, ಆ ಬ್ಯಾಂಕಿನ ಮ್ಯಾನೇಜರ್‌ ಜೊತೆಗೆ ಮಾತನಾಡಿ ವ್ಯಾವಹಾರಿಕ ಲೋಪದ ಬಗ್ಗೆ ಮನದಟ್ಟು ಮಾಡಬಹುದಾಗಿದೆ. ಫಲಾನುಭವಿಯ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ನಿಮ್ಮ ದುಡ್ಡನ್ನು ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular