HomeIndiaBREAKING: ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಗೆ ನರ್ಸ್ ಬಲಿ

BREAKING: ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಗೆ ನರ್ಸ್ ಬಲಿ

ಕೋಲ್ಕತ್ತಾ: ಮಾರಣಾಂತಿಕ ನಿಪಾ ವೈರಸ್ ಮತ್ತೆ ಹೆಚ್ಚುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಿಪಾ ಸೋಂಕಿಗೆ ನರ್ಸ್ ಓರ್ವರು ಬಲಿಯಾಗಿರುವ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬರಾಸಾತ್ ನ ಖಾಸಗಿ ಆಸ್ಪತ್ರೆಯ ನರ್ಸ್ ನಿಪಾ ಸೋಂಕಿನಿಂದ ಮೃತಪಟ್ಟಿದ್ದಾರೆ. 25 ವರ್ಷದ ನರ್ಸ್ ನಿಪಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರಾಸಾತ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಇಬ್ಬರು ನರ್ಸ್ ಗಳಿಗೆ ನಿಪಾ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳಾ ನರ್ಸ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೋರ್ವ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ನಿಪಾ ವೈರಸ್:
ನಿಪಾ ವೈರಸ್ ಹಣ್ಣು ತಿನ್ನುವ ಬಾವಲಿಗಳಿಂದ ಹರಡುವ ಮಾರಣಾಂತಿಕ ಝೂನೋಟಿಕ್ ವೈರಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ) ಸೋಂಕು ಆಗಿದೆ. ಇದು ಮೆದುಳಿನ ಉರಿಯೂತ ಅಥವಾ ತೀವ್ರ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ.

ಬಾವಲಿಗಳು ತಿಂದ ಹಣ್ಣನ್ನು ತಿನ್ನಬಾರದು. ಸಾಮಾನ್ಯವಾಗಿ ನಿಪಾ ಸೋಂಕು ಬಾವಲಿಗಳಿಂದ ಹರಡುತ್ತದೆ. ಕಲುಷಿತ ಆಹಾರ, ಸೋಂಕಿತ ಪ್ರಾಣಿಗಳು (ಹಂದಿ, ನಾಯಿ, ಆಡು) ಅಥವಾ ಸೋಂಕಿತ ಮನುಷ್ಯರೊಂದಿಗೆ ನೇರ ಸಂಪರ್ಕದಿಂದ ಹರಡುತ್ತದೆ.

ಲಕ್ಷಣಗಳು:
ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವುದು. ಕೆಲವರಲ್ಲಿ ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

ತೀವ್ರ ಜ್ವರ ಮತ್ತು ನರಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯಕೀಯ ತಪಾಸಣೆ ಅಗತ್ಯ.

ತಡೆಗಟ್ಟುವ ಕ್ರಮಗಳು:
ಬಾವಲಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದು.
ತಾಳೆ ರಸ (Raw date palm sap) ಸೇವನೆಯನ್ನು ತಪ್ಪಿಸಬೇಕು.
ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಿ ಮತ್ತು ಮಾಸ್ಕ್/ಕೈಗವಸುಗಳನ್ನು ಬಳಸಿ.
ವೈಯಕ್ತಿಕ ನೈರ್ಮಲ್ಯ ಮತ್ತು ಕೈ ತೊಳೆಯುವುದನ್ನು ಕಟ್ಟುನಿಟ್ಟಾಗಿ ಪಾಲಿಸಿ.

ನಿಪಾ ವೈರಸ್ ಮೊದಲ ಬಾರಿಗೆ 1998-1999ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಪತ್ತೆಯಾಗಿತ್ತು. ಭಾರತದಲ್ಲಿ ವಿಶೇಷವಾಗಿ ಕೇರಳದಲ್ಲಿ ಈ ಹಿಂದೆ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಆದ್ಯತೆಯ ರೋಗಕಾರಕಗಳಲ್ಲಿ ಒಂದೆಂದು ಎಚ್ಚರಿಕೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular