HomeLatest NewsBREAKING NEWS: ಸಹೋದ್ಯೋಗಿಯಿಂದಲೇ ಕರ್ತವ್ಯದಲ್ಲಿದ್ದ BSF ಯೋಧನ ಗುಂಡಿಕ್ಕಿ ಹತ್ಯೆ!

BREAKING NEWS: ಸಹೋದ್ಯೋಗಿಯಿಂದಲೇ ಕರ್ತವ್ಯದಲ್ಲಿದ್ದ BSF ಯೋಧನ ಗುಂಡಿಕ್ಕಿ ಹತ್ಯೆ!

ಕೋಲ್ಕತ್ತಾ: ಇಬ್ಬರ ಯೋಧರ ನಡುವಿನ ಗಲಾಟೆ ಓರ್ವ ಯೋಧನ ಹತ್ಯೆಯಲ್ಲಿ ಕೊನೆಯಾಗಿದೆ. ಸಹೋದ್ಯೋಗಿಯೇ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಅನ ಇನ್ನೋರ್ವ ಯೋಧನನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಎಸ್.ಕೆ. ಮಿಶ್ರಾ ಎಂಬ ಯೋಧ, ರತನ್ ಲಾಲ್ ಸಿಂಗ್ (38) ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಬ್ಬರು ಬಿಎಸ್ ಎಫ್ ಯೋಧರಾಗಿದ್ದು, ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ, ಎಸ್.ಕೆ.ಮಿಶ್ರಾ, ರತನ್ ಲಾಲ್ ಅವರನ್ನು ಹತ್ಯೆ ಮಾಡಿದ್ದಾರೆ. ಯೋಧರ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular