30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು

ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ ಬಂಕುರಾದ ಬೀದಿಗಳಲ್ಲಿ ಸಂಚರಿಸುತ್ತಿದ್ದು, ಜಾಲತಾಣದ ಗಮನ ಸೆಳೆದಿದ್ದಾರೆ.

ಈಗ ಈ ಕಾರಿಗೆ ಯಾವುದೇ ಪೆಟ್ರೋಲ್ ಅಗತ್ಯವಿಲ್ಲ. ಅಲ್ಲದೆ, ಇದು ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಕಾರಿನ ನಿರ್ವಹಣಾ ವೆಚ್ಚ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಈ ಪೆಟ್ರೋಲ್-ಮುಕ್ತ “ಸೋಲಾರ್ ಕಾರ್” ಕೇವಲ 30 ರಿಂದ 35 ರೂ.ಗಳಲ್ಲಿ 100 ಕಿಲೋಮೀಟರ್ ಓಡುತ್ತದೆ. ಇದು ಈಗ ಬಂಕುರಾದ ಯಾಂತ್ರಿಕ ಐಕಾನ್ ಆಗಿ ಮಾರ್ಪಟ್ಟಿದೆ.

ಸದ್ಯ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಂಕುರಾದ ಮನೋಜಿತ್ ಮಂಡಲ್ ಸೌರಶಕ್ತಿ ಚಾಲಿತ ಕಾರು ತಯಾರಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಪ್ರಎಂಜಿನ್ ಇಲ್ಲದ ಕಾರಣ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಬರುವುದಿಲ್ಲ. ಆದರೆ, ಗೇರ್ ವ್ಯವಸ್ಥೆ ಇದೆ. ಈ ಅದ್ಭುತ ಕಾರು ನಾಲ್ಕನೇ ಗೇರ್‌ನಲ್ಲಿ ಬಹುತೇಕ ಮೌನವಾಗಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read