’ನಿಮಗೆ ಹೇಳುತ್ತಿಲ್ಲ, ಸೂಚಿಸುತ್ತಿದ್ದೇವೆ’: ವಿವೇಕ್ ಅಗ್ನಿಹೋತ್ರಿಗೆ ಹೈಕೋರ್ಟ್ ಖಡಕ್ ಸಂದೇಶ

ನ್ಯಾಯಾಧೀಶ ಎಸ್‌. ಮುರಳೀಧರ್‌ ವಿರುದ್ಧ ನೀಡಿದ ಹೇಳಿಕೆಗಳ ಕಾರಣದಿಂದಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಗೆ ಏಪ್ರಿಲ್ 10ರಂದು ಹಾಜರಾಗುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ನ್ಯಾಯಾಧೀಶ ಮುರಳೀಧರ್‌ ವಿರುದ್ಧ 2018ರಲ್ಲಿ ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ದೆಹಲಿ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಈ ಕುರಿತಂತೆ ’ಷರತ್ತುರಹಿತ ಕ್ಷಮಾಪಣೆ’ ಕೇಳಿ ’ವಿಷಾದ ವ್ಯಕ್ತಪಡಿಸಿದ’ ವಿವೇಕ್ ಅಗ್ನಿಹೋತ್ರಿರನ್ನು ಗುರುವಾರದಂದು ಕೋರ್ಟ್‌ನಲ್ಲಿ ಹಾಜರಿರುವಂತೆ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.

ಭೀಮಾ ಕೋರೇಗಾಂವ್ ಪ್ರಕರಣದ ಸಂಬಂಧ ಗೌತಮ್ ನವ್ಲಾಕಾಗೆ ವಿಧಿಸಿದ್ದ ಗೃಹ ಬಂಧನ ಹಾಗೂ ಪ್ರಯಾಣ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದ ನ್ಯಾಯಾಧೀಶ ಮುರಳೀಧರ್‌ ವಿರುದ್ಧ 2018ರಲ್ಲಿ ವಿವೇಕ್ ಅಗ್ನಿಹೋತ್ರಿ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ತುತ್ತಾಗಿದ್ದವು.

ಇದೇ ವಿಚಾರವಾಗಿ ವಿವೇಕ್ ಅಗ್ನಿಹೋತ್ರಿಯೊಂದಿಗೆ ಆನಂದ್ ರಂಗನಾಥನ್ ಹಾಗೂ ಸ್ವರಾಜ್ಯ ಪೋರ್ಟಲ್ ಸುದ್ಧಿವಾಹಿನಿ ವಿರುದ್ಧವೂ ಹೈಕೋಟ್ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿತ್ತು.

ಸದ್ಯ ಜ್ವರದಿಂದ ಬಳಲುತ್ತಿರುವ ಅಗ್ನಿಹೋತ್ರಿ ವೈಯಕ್ತಿಕವಾಗಿ ಕೋರ್ಟ್ ಮುಂದೆ ಹಾಜರಿರಲು ಸಾಧ್ಯವಿಲ್ಲ ಎಂದು ನಿರ್ದೇಶಕನ ಪರ ನ್ಯಾಯಾಧೀಶರು ಕೋರ್ಟ್‌ಗೆ ತಿಳಿಸಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ನಾವು ಕೇಳುತ್ತಿಲ್ಲ. ನಿಮಗೆ ಹಾಜರಿರಲು ಸೂಚಿಸಿದ್ದೇವೆ ! ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ,” ಎಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read