ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ತೂಕ…..?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಸಿ ನೀರು ಸೇವನೆಯಿಂದ ತೂಕ ನಷ್ಟವಾಗುತ್ತದೆಯೇ ಎಂಬ ಅನುಮಾನ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದ ಮುಚ್ಚಿದ ಮೂಗು ತೆರೆದುಕೊಳ್ಳುತ್ತದೆ. ನೋಯುತ್ತಿರುವ ಗಂಟಲು, ಶೀತದ ಸಮಸ್ಯೆ ದೂರವಾಗುತ್ತದೆ. ಎದೆಯಲ್ಲಿ ಸ್ಟೋರ್ ಆದ ಲೋಳೆಯನ್ನು ನಿವಾರಿಸುತ್ತದೆ, ಕೆಮ್ಮು ದೂರ ಮಾಡುತ್ತದೆ. ಚಳಿಗಾಲದಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಯನ್ನು ನಿವಾರಿಸುತ್ತದೆ. ಬಿಸಿ ನೀರು ಸೇವನೆಯಿಂದ ಕೇಂದ್ರ ನರಮಂಡಲವನ್ನು ಸಕ್ರಿಯಗೊಳಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಹಾಗೇ ಸಂಶೋಧನೆಯ ಪ್ರಕಾರ ಬಿಸಿ ನೀರನ್ನು ಕುಡಿಯುವುದರಿಂದ ತೂಕ ನಷ್ಟವಾಗುತ್ತದೆಯಂತೆ. ತಣ್ಣೀರಿಗಿಂತ ಸ್ವಲ್ಪ ಸಮಯದವರೆಗೆ ಬಿಸಿ ನೀರು ಹೊಟ್ಟೆಯಲ್ಲಿರುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ಕಾರಣದಿಂದಾಗಿ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಇದಲ್ಲದೇ ಇದು ಕೊಬ್ಬಿನ ಕೋಶಗಳನ್ನು ಕರಗಿಸಲು ಸಹಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read