HomeLive Newsಮದುವೆ ವೇದಿಕೆಯಲ್ಲೇ ವರನ ಮಾಜಿ ಪ್ರೇಯಸಿಗೆ ಮಾರಿಹಬ್ಬ: ಕೂದಲನ್ನು ಹಿಡಿದು ಎಳೆದಾಡಿದ ವಧು!

ಮದುವೆ ವೇದಿಕೆಯಲ್ಲೇ ವರನ ಮಾಜಿ ಪ್ರೇಯಸಿಗೆ ಮಾರಿಹಬ್ಬ: ಕೂದಲನ್ನು ಹಿಡಿದು ಎಳೆದಾಡಿದ ವಧು!

ಇಂಡೋನೇಷ್ಯಾದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ನಡೆದ ಹಠಾತ್ ಬೆಳವಣಿಗೆಯ ವಿಡಿಯೋವೊಂದು ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮದುವೆಯ ವೇದಿಕೆಯ ಮೇಲೆ ವರನ ಹಳೆಯ ಗೆಳತಿ (Ex-girlfriend) ನಾಟಕೀಯವಾಗಿ ವರ್ತಿಸಿದ್ದು, ಇದಕ್ಕೆ ನವವಧು ನೀಡಿದ ಖಡಕ್ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ.

ಮದುವೆ ವೇದಿಕೆಯಲ್ಲೇ ಹೈಡ್ರಾಮಾ

ವೈರಲ್ ಆಗಿರುವ ವಿಡಿಯೋದಲ್ಲಿ, ಮದುವೆಯ ಸಂಭ್ರಮದ ನಡುವೆಯೇ ವೇದಿಕೆ ಏರುವ ಮಹಿಳೆಯೊಬ್ಬರು ವರನ ಕೈ ಹಿಡಿದು ಮುತ್ತಿಡಲು ಪ್ರಯತ್ನಿಸುತ್ತಾರೆ. ಇದನ್ನು ಕಂಡೊಡನೆಯೇ ಸಿಟ್ಟಿಗೆದ್ದ ವಧು, ಕಿಂಚಿತ್ತೂ ತಡಮಾಡದೆ ಆ ಮಹಿಳೆಯ ಕೂದಲನ್ನು ಹಿಡಿದು ಎಳೆದಾಡಿ ವೇದಿಕೆಯಿಂದ ದೂರ ತಳ್ಳಿದ್ದಾರೆ. ಮದುವೆಯ ಫೋಟೋಶೂಟ್ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಅಲ್ಲಿದ್ದ ಅತಿಥಿಗಳು ಒಂದು ಕ್ಷಣ ದಂಗಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಧುವಿನ ಧೈರ್ಯಕ್ಕೆ ಮೆಚ್ಚುಗೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಧುವಿನ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. “ಇತಿಹಾಸ ಮರುಕಳಿಸದಂತೆ ವಧು ತಕ್ಷಣವೇ ತೆಗೆದುಕೊಂಡ ನಿರ್ಧಾರ ಅದ್ಭುತವಾಗಿದೆ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, “ಮದುವೆಯಂತಹ ಪವಿತ್ರ ಕಾರ್ಯಕ್ರಮಕ್ಕೆ ಇಂತಹವರನ್ನು ಆಹ್ವಾನಿಸಿದ್ದಾದರೂ ಯಾರು?” ಎಂದು ಪ್ರಶ್ನಿಸಿದ್ದಾರೆ.

ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಈ ರೀತಿಯ ವರ್ತನೆ ಅಕ್ಷಮ್ಯ ಎಂದು ಅಭಿಪ್ರಾಯಪಟ್ಟಿರುವ ಬಹುತೇಕ ಮಂದಿ, ತನ್ನ ಸಂಸಾರವನ್ನು ಉಳಿಸಿಕೊಳ್ಳಲು ವಧು ತೋರಿದ ಈ ಧೈರ್ಯಕ್ಕೆ ‘ಕ್ವೀನ್’ ಎಂದು ಹೊಗಳಿದ್ದಾರೆ. ಸದ್ಯ ಈ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular