HomeBeautyಬೇಸಿಗೆ ಬೇಗೆ ನಿವಾರಿಸಲು ಧರಿಸಿ ತಂಪು ತಂಪು ಉಡುಪು

ಬೇಸಿಗೆ ಬೇಗೆ ನಿವಾರಿಸಲು ಧರಿಸಿ ತಂಪು ತಂಪು ಉಡುಪು

ಬೇಸಿಗೆ ಕಾಲಿಟ್ಟಾಯ್ತು. ಎಂಥ ಉಡುಪುಗಳನ್ನು ಧರಿಸಿ ಉರಿಯಿಂದ ಬಚಾವಾಗಬಹುದು ಎಂದು ಆಲೋಚಿಸುತ್ತಿದ್ದೀರಾ ? ಸೆಖೆಗೆ ಹೇಳಿ ಮಾಡಿಸಿದಂಥ ಆಧುನಿಕ ಉಡುಪುಗಳು ಇಲ್ಲಿವೆ. ನಿಮಗೆ ಬೇಕಿದ್ದನ್ನು ಆಯ್ದುಕೊಳ್ಳಬಹುದು.

ಮಳೆ ಚಳಿಗಾಲ ಎಲ್ಲಾ ಮುಗಿದಾಯ್ತು, ಇನ್ನು ವಾರ್ಡ್ ರೋಬ್ ನಲ್ಲಿ ಇರುವುದೆಲ್ಲಾ ವ್ಯರ್ಥ ಎಂದು ಮೂಗು ಮುರಿಯಬೇಡಿ. ಅದರಲ್ಲಿ ಸ್ಲೀವ್ಸ್ ಇಲ್ಲದ ಟಾಪ್ ಗಳನ್ನು ಆಯ್ಕೆ ಮಾಡಿ ಧರಿಸಿ. ಬೇಸಿಗೆ ಬಿಸಿಗೆ ಮೈಯೆಲ್ಲಾ ಬೆವರಿ ವಾಸನೆ ಬರುವುದರಿಂದ ಬಚಾವಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳದಿ ಬಣ್ಣ ಬೇಸಿಗೆಗೆ ಹೇಳಿ ಮಾಡಿಸಿದುದು. ಮಳಿಗೆಗಳಲ್ಲಿ ಆಕರ್ಷಕ ಬಣ್ಣದ ಇತರ ದಿರಿಸುಗಳು ಕಂಡರೂ ಅತ್ತ ಕಣ್ಣು ಹಾಯಿಸದೆ ಕೇವಲ ಹಳದಿ ಬಣ್ಣದ ಉಡುಪನ್ನೇ ಆಯ್ಕೆ ಮಾಡಿ. ಇದು ಸೂರ್ಯನ ಬಿಸಿಯನ್ನು ಹೀರಿಕೊಳ್ಳುತ್ತದೆ ಹಾಗೂ ನೀವು ಬೆಳ್ಳಗಿದ್ದರೂ ಕಪ್ಪಗಿದ್ದರೂ ನಿಮಗೆ ಹೊಂದಿಕೆಯಾಗುತ್ತದೆ.

ಸ್ಲಿಟ್ ಸ್ಲೀವ್ಸ್ ಕೂಡಾ ಇಂದಿನ ಹೊಸ ಟ್ರೆಂಡ್ ಗಳಲ್ಲೊಂದು. ಡೆನಿಮ್, ಜಾಕೆಟ್, ಡ್ರೆಸ್, ಮ್ಯಾಕ್ಸಿಗಳಲ್ಲೂ ಅದೇ ವಿನ್ಯಾಸ ಟ್ರೆಂಡ್ ಆಗುತ್ತಿದೆ. ಈ ತೆರನಾದ ಉಡುಪಿನ ಜೊತೆ ಕೈಗೊಂದಿಷ್ಟು ಫ್ಯಾನ್ಸಿ ಬಳೆಗಳು ಇಲ್ಲವೇ ಬ್ರಾಸ್ ಲೈಟ್ ಧರಿಸಿ ಹೊರನಡೆದರೆ ನಿಮ್ಮ ಲುಕ್ಕೇ ವಿಭಿನ್ನವಾಗಿರುತ್ತದೆ.

ಬೇಸಿಗೆಯಲ್ಲಿ ಹೈ ಹೀಲ್ಸ್ ಚಪ್ಪಲಿಗಳನ್ನು ಆರಾಮವಾಗಿ ಧರಿಸಿ ಓಡಾಡಬಹುದು. ಮಳೆಗಾಲದ ಕಿರಿಕಿರಿ ಇರುವುದಿಲ್ಲ. ಅದರೊಂದಿಗೆ ಕಣ್ಣಿಗೆ ಕೂಲಿಂಗ್ ಗ್ಲಾಸ್, ಉದ್ದನೆಯ ಹ್ಯಾಂಗಿಂಗ್ ಬ್ಯಾಗ್ ಏರಿಸಿ ಹೊರನಡೆದರೆ ನಿಮ್ಮನ್ನು ಹಿಡಿಯುವವರಾದರೂ ಯಾರು?

For Latest News Updates, Join Our Whatsapp Community🚩
RELATED ARTICLES

Most Popular