ನವದೆಹಲಿ : ಶೀಘ್ರವೇ ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಭಾರತವು ಅಮೆರಿಕದ ಜೊತೆ ಉತ್ತಮ ಸ್ನೇಹ ಹೊಂದಿದೆ. ಭಾರತದೊಂದಿಗಿನ ಬಾಂಧವ್ಯ ಗಟ್ಟಿಯಾಗಿದೆ. ಬೇರೆ ಯಾರ ಜೊತೆಯೂ ಒಪ್ಪಂದ ಮಾಡಿಕೊಳ್ಳಲ್ಲ.ಶೀಘ್ರವೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಕುರಿತು ಎರಡು ದೇಶಗಳ ಸಮಾಲೋಚಕರ ತಂಡವು ನಾಲ್ಕು ದಿನಗಳ ಕಾಲ ಮಾತುಕತೆ ನಡೆಸಿದ ವಾರಗಳ ನಂತರ, ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ “ಬಹಳ ದೊಡ್ಡ” ವ್ಯಾಪಾರ ಒಪ್ಪಂದದ ಬಗ್ಗೆ ಸುಳಿವು ನೀಡಿದ್ದಾರೆ.
ಶ್ವೇತಭವನದಲ್ಲಿ ನಡೆದ ‘ಬಿಗ್ ಬ್ಯೂಟಿಫುಲ್ ಈವೆಂಟ್’ ಅನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತದೊಂದಿಗೆ “ಮಹಾನ್ ಒಪ್ಪಂದ” ಹೊಂದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತದೊಂದಿಗೆ “ಬಹಳ ದೊಡ್ಡ” ಒಪ್ಪಂದದ ಬಗ್ಗೆ ಸುಳಿವು ನೀಡಿದರು. ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ, ಅಮೆರಿಕ ಅಧ್ಯಕ್ಷರು ತಮ್ಮ ದೇಶವು ಕೆಲವು ಉತ್ತಮ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಏತನ್ಮಧ್ಯೆ, ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿಯೂ ಆಗಿರುವ ಮುಖ್ಯ ಸಮಾಲೋಚಕ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ತಂಡವು ತಮ್ಮ ಅಮೆರಿಕದ ಸಹವರ್ತಿಗಳೊಂದಿಗೆ ಮುಂದಿನ ಸುತ್ತಿನ ವ್ಯಾಪಾರ ಮಾತುಕತೆಗಾಗಿ ವಾಷಿಂಗ್ಟನ್ಗೆ ಆಗಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಜುಲೈ 9 ರ ಮೊದಲು ಎರಡೂ ದೇಶಗಳು ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿದುಬಂದಿದೆ. ಏಪ್ರಿಲ್ 2 ರಂದು ಅಮೆರಿಕ ಘೋಷಿಸಿದ ಹೆಚ್ಚಿನ ಸುಂಕಗಳನ್ನು ಟ್ರಂಪ್ ಆಡಳಿತವು ಜುಲೈ 9 ರವರೆಗೆ ಸ್ಥಗಿತಗೊಳಿಸಿದೆ.

