HomeKarnatakaನಾಳೆ ಖಂಡಿತವಾಗಿಯೂ ರಣಜಿ ಟ್ರೋಫಿ ತೆಗೆದುಕೊಂಡೇ ಹೋಗುತ್ತೇವೆ: ಹುಬ್ಬಳ್ಳಿಯಲ್ಲಿ ಜಮ್ಮು- ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ...

ನಾಳೆ ಖಂಡಿತವಾಗಿಯೂ ರಣಜಿ ಟ್ರೋಫಿ ತೆಗೆದುಕೊಂಡೇ ಹೋಗುತ್ತೇವೆ: ಹುಬ್ಬಳ್ಳಿಯಲ್ಲಿ ಜಮ್ಮು- ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ವಿಶ್ವಾಸ

ಹುಬ್ಬಳ್ಳಿ: ನಾಳೆ ರಣಜಿ ಟ್ರೋಪಿಯ ಫೈನಲ್ ಪಂದ್ಯದ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ನಮ್ಮ ತಂಡ ಮೊದಲ ಬಾರಿಗೆ ರಣಜಿ ಗೆಲ್ಲುವ ಹೊಸ್ತಿಲಲ್ಲಿದೆ. ನಮ್ಮ ತಂಡವನ್ನು ಪ್ರೋತ್ಸಾಹಿಸಲು ಹುಬ್ಬಳ್ಳಿಗೆ ಬಂದಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಕಾಶ್ಮೀರ ತಂಡ ಈ ಹಂತಕ್ಕೆ ಬರಲ್ಲ ಎನ್ನುತ್ತಿದ್ದರು. ಆದರೆ ನಮ್ಮ ಆಟಗಾರರು ಉತ್ತಮವಾಗಿ ಆಡಿ ತೋರಿಸಿದ್ದಾರೆ. ಫೈನಲ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ. ಜಮ್ಮು ಕಾಶ್ಮೀರದಲ್ಲಿ ಒಳ್ಳೆಯ ಕ್ರಿಕೆಟ್ ಆಟಗಾರರು ಇದ್ದಾರೆ. ರಣಜಿ ಪಂದ್ಯವೇ ಇದನ್ನು ಸಾಬೀತು ಮಾಡಿ ತೋರಿಸಿದೆ. ನಾವು ಖಂಡಿತವಾಗಿ ಟ್ರೋಫಿ ತೆಗೆದುಕೊಂಡೇ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮಗೆ ಫೈನಲ್ ತಲುಪಲು ಇದು ಒಂದು ದೊಡ್ಡ ಕ್ಷಣ. ಏಕೆಂದರೆ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿಯ ಫೈನಲ್ ತಲುಪಿದೆ. ಈ ಹಂತವನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದು ಅನೇಕ ಜನರು ಹೇಳಿದರು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ನೀಡಿದ ಪ್ರದರ್ಶನವನ್ನು ನೋಡಿದರೆ, ನಾವು ಇಲ್ಲಿಂದ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಆಟಗಾರರನ್ನು ದೇಶಕ್ಕಾಗಿ ಆಡಲು ಆಹ್ವಾನಿಸುವ ಅಥವಾ ಕೇಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಒಬ್ಬರು ಅಥವಾ ಇಬ್ಬರು ಖಂಡಿತವಾಗಿಯೂ ಭಾರತೀಯ ತಂಡದ ಬಣ್ಣಗಳನ್ನು ಧರಿಸಲು ಅರ್ಹರು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular