HomeLatest Newsಕುಡಿಯಲು, ಕೃಷಿಗೆ ಹಂಚಿಕೆಯಾದ ನೀರು ಎಂದಿನಂತೆ ಹರಿಯಲಿದೆ, ರೈತರಿಗೆ ಆತಂಕ ಬೇಡ: ಸಚಿವ ಪರಮೇಶ್ವರ್

ಕುಡಿಯಲು, ಕೃಷಿಗೆ ಹಂಚಿಕೆಯಾದ ನೀರು ಎಂದಿನಂತೆ ಹರಿಯಲಿದೆ, ರೈತರಿಗೆ ಆತಂಕ ಬೇಡ: ಸಚಿವ ಪರಮೇಶ್ವರ್

ತುಮಕೂರು: ತುಮಕೂರಿಗೆ ಹಂಚಿಕೆಯಾಗಿರುವ ನೀರು ಎಂದಿನಂತೆ ಹರಿಯಲಿದೆ. ಅಲ್ಲದೇ ಲಿಂಕ್ ಎಕ್ಸ್‌ ಪ್ರೆಸ್‌ ನಿಂದ ಮಾಗಡಿ ಮತ್ತು ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದಿಲ್ಲ. ಈ ಬಗ್ಗೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರು ನಗರದ ಹೇಮಾವತಿ ನಾಲಾ ವಲಯ ಕಚೇರಿಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್‌ ಕೆನಾಲ್ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದ್ದಾರೆ.

ತುಮಕೂರು ಭಾಗದ ಹೇಮಾವತಿ ಕೆನಾಲ್‌‌ ನೀರು 14 ತಾಲ್ಲೂಕುಗಳಿಗೆ, ಒಟ್ಟು 25.31 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ‌‌ ತುಮಕೂರಿಗೆ 2815 ಎಂಸಿಎಫ್‌ಟಿ ಹಾಗೂ ಕುಣಿಗಲ್ ತಾಲ್ಲೂಕಿಗೆ ಇಲ್ಲಿವರೆಗೆ ಕುಣಿಗಲ್‌ಗೆ ಅತ್ಯಂತ ಕಡಿಮೆ‌ ಪ್ರಮಾಣದ ನೀರು ಸಿಕ್ಕಿದೆ. ಈ ಅವಧಿಯಲ್ಲಿ ಕುಣಿಗಲ್‌ ತಾಲ್ಲೂಕಿಗೆ ಶೇ.10ರಷ್ಟು ನೀರು ಹೋಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2020-21ರಲ್ಲಿ ತುಮಕೂರು ಬ್ರ್ಯಾಂಚ್‌ಗೆ 25.270 ಟಿಎಂಸಿ ನೀರು ಬಂದಿದೆ. ನಮಗೆ ಬರಬೇಕಿದ್ದ ಸಂಪೂರ್ಣ ನೀರು ಸಿಕ್ಕಿದೆ. ಆದರೆ 2020-21ರಲ್ಲಿ 0.4486 MCFT ನೀರು ಕುಣಿಗಲ್‌ ತಾಲ್ಲೂಕಿಗೆ ಹೋಗಿದೆ. 1 ಟಿಎಂಸಿ ಪ್ರಮಾಣದ ನೀರು ಸಹ ಹೋಗಿಲ್ಲ. ಕುಣಿಗಲ್‌ ಜನ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದರು. ಎಕ್ಸ್‌ಪ್ರೆಸ್ ಕೆನಾಲ್ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಈ ಪ್ರಸ್ತಾವನೆಯೂ ಸರ್ಕಾರದ ಮುಂದೆ ಬಂದಾಗ ತಾಂತ್ರಿಕ ಸಾಧ್ಯತೆ ಹಾಗೂ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಿತ್ತು.‌

2025ರ ಜನವರಿ 5ರಂದು ನಡೆದ ಕ್ಯಾಬಿನೆಟ್‌ನಲ್ಲಿ ಲಿಂಕ್‌ ಕೆನಾಲ್ ಬಗ್ಗೆ ಪರಿಶೀಲನೆ ಮಾಡಿ, ಈ ಯೋಜನೆಗೆ ಅನುಮೋದನೆ ನೀಡಿ, ಸುಮಾರು 986 ಕೋಟಿ ರೂ. ಅನುದಾನ ನೀಡಲಾಯಿತು.

ಲಿಂಕ್ ಎಕ್ಸ್‌ಪ್ರೆಸ್ ಕೆನಾಲ್‌ ಮಾಡಿದರೆ, ರೈತರ ವ್ಯವಸಾಯಕ್ಕೆ ಮತ್ತು ಕುಡಿಯಲು ನೀರು ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆಗಳು ಹುಟ್ಟಿಕೊಂಡಿವೆ. ಈ ಪ್ರಾಜೆಕ್ಟ್‌ನಿಂದ ತುಮಕೂರು ಭಾಗದ ಜನರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗುವುದಿಲ್ಲ. ತುಮಕೂರಿಗೆ ಹಂಚಿಕೆಯಾಗಿರುವ ನೀರು ಎಂದಿನಂತೆ ಹರಿಯಲಿದೆ. ಅಲ್ಲದೇ ಲಿಂಕ್ ಎಕ್ಸ್‌ಪ್ರೆಸ್‌ನಿಂದ ಮಾಗಡಿ ಮತ್ತು ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದಿಲ್ಲ. ಈ ಬಗ್ಗೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಹೇಮಾವತಿ ಲಿಂಕ್‌ ಕೆನಾಲ್‌ ಕುರಿತಂತೆ ಟೆಕ್ನಿಕಲ್ ಕಮಿಟಿ ನೀಡಿರುವ ವರದಿ ಪ್ರಮುಖ ಶಿಫಾರಸ್ಸುಗಳ ಪ್ರಕಾರ,

ತುಮಕೂರು ಮತ್ತು ಕುಣಿಗಲ್ ಕಡೆ ನೀರು ಬಿಡುವ ಲೆವೆಲ್ ಸಮನಾಗಿರಬೇಕು.

ಕೆನಾಲ್‌ಗಳಿಗೆ ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಹಾಕಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ನಷ್ಟವಾಗುತ್ತಿದೆ. ಇದನ್ನು‌ ತಡೆಗಟ್ಟುವುದು.

70 ಕಿ, ಮೀ ರಲ್ಲಿ ರೆಗ್ಯೂಲೆಟರಿ ಮೆಕ್ಯಾನಿಸಂ ಇರಬೇಕು. (ಸ್ಕಾಡಾ )ಅಳವಡಿಸಬೇಕು ಎಂಬುದಾಗಿದೆ. ಕುಣಿಗಲ್ ಕಡೆ ಎಷ್ಟು ನೀರು ಹೋಗುತ್ತದೆ, ತುಮಕೂರು ಕಡೆ ಎಷ್ಟು ಪ್ರಮಾಣದ ನೀರು ಹೋಗುತ್ತದೆ ಎಂಬುದನ್ನು ಪ್ರತಿದಿನ ಲೈವ್ ಆಗಿ ತೋರಿಸುತ್ತದೆ ಎಂಬುದನ್ನು ಶಿಫಾರಸ್ಸು ಮಾಡಿದ್ದಾರೆ. ಈ ಎಲ್ಲ ಶಿಫರಸ್ಸುಗಳನ್ನು ಅನುಸರಿಸಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರವು ರೈತರ ಪರವಾಗಿದೆ. ರೈತರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತ ಬಂದಿದ್ದೇವೆ.

2013-18ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದ್ದೆವು. ಅದೇ ಪ್ರಕಾರ ಈ ಅವಧಿಯಲ್ಲಿ 68 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ರೈತ ಸಮುದಾಯಕ್ಕೆ ಅನುದಾನವನ್ನು ಬಳಸಿದ್ದೇವೆ. ನೀರಾವರಿಗೆ ಆದ್ಯತೆ ಕೊಡುತ್ತಾ ಬಂದಿದ್ದೇವೆ. ಈಗಲೂ ಮುಂದುವರಿಸಿದ್ದೇವೆ. ಈಗಲೂ ಮುಂದುವರಿಸುತ್ತಿದ್ದೇವೆ. ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಯನ್ನು ಯಾರಿಗೂ ತೊಂದರೆ ಆಗದಂತೆ ಮಾಡುತ್ತೇವೆ. ತುಮಕೂರಿನ ಮಗನಾಗಿ, ತುಮಕೂರು ಜಿಲ್ಲಾ‌‌ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನರಿಗೆ ವಿರುದ್ಧವಾದ ಕೆಲಸವನ್ನು ನಾನು‌ ಮಾಡುವುದಿಲ್ಲ. ತುಮಕೂರಿನ ಜನರ ವಿಶ್ವಾಸದಿಂದ ಕೆಲಸ‌ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಯೋಜನೆಯಿಂದ ತುಮಕೂರಿನ ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ. ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಅನುಷ್ಟಾನ‌ ಮಾಡುತ್ತೇವೆ. ತುಮಕೂರಿನ ಜನಕ್ಕೆ, ರೈತರಿಗೆ, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಇದು‌ ನನ್ನ ಜವಾಬ್ದಾರಿ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular