RCB ನಾಯಕತ್ವ ಬಿಟ್ಟುಕೊಟ್ಟಿದ್ದೇಕೆ ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ ವಿರಾಟ್…!

ಪುರುಷರ ಐಪಿಎಲ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಈಗ ಮಹಿಳಾ ಐಪಿಎಲ್ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಜೊತೆ ಬುಧವಾರದಂದು ನಡೆದ ಸಂವಾದದ ವೇಳೆ ವಿರಾಟ್ ಕೊಹ್ಲಿ ಮಹತ್ವದ ಮಾಹಿತಿ ಒಂದನ್ನು ಬಹಿರಂಗಪಡಿಸಿದ್ದಾರೆ.

ಈ ಸಂವಾದದ ವೇಳೆ ಎರಡು ವರ್ಷಗಳ ಹಿಂದೆ ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದೇಕೆ ಎಂಬ ಕಾರಣವನ್ನು ಅವರು ವಿವರಿಸಿದ್ದು, ವಿಫಲತೆ ಕಾರಣಕ್ಕೆ ಆ ಸಂದರ್ಭದಲ್ಲಿ ನನಗೆ ನನ್ನ ಮೇಲೆಯೇ ನಂಬಿಕೆ ಉಳಿದಿರಲಿಲ್ಲ. ಇನ್ನು ಮುಂದೆ ನಾಯಕತ್ವದ ಹೊಣೆಯನ್ನು ನಿಭಾಯಿಸಲು ಸಾಧ್ಯವಾಗದು ಎಂದು ನನಗೆ ಅನಿಸಿದ ಕಾರಣ ಆ ಜವಾಬ್ದಾರಿಯಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದೆ ಎಂದು ಹೇಳಿದ್ದಾರೆ.

ನನ್ನ ಈ ಹಿಂದಿನ ಅನುಭವಕ್ಕೆ ತಕ್ಕಂತೆ ಆಡಬೇಕೆಂದು ಪ್ರತಿ ಬಾರಿಯೂ ಬಯಸುತ್ತಿದ್ದೆ. ಇದು ನನ್ನಲ್ಲಿ ಒತ್ತಡವನ್ನು ಉಂಟು ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ನೈಜ ಆಟವಾಡದೆ ಹಲವು ಬಾರಿ ಎಡವಿದ್ದೇನೆ ಎಂದು ವಿರಾಟ್ ಕೊಹ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read