HomeIndiaWATCH VIDEO : ಯೋಧರ ಮೈ ಮೇಲೆ ಹಾವುಗಳ ಹರಿದಾಟ ; ಅಬ್ಬಾ..! ಭಾರತೀಯ ಸೇನೆಯ...

WATCH VIDEO : ಯೋಧರ ಮೈ ಮೇಲೆ ಹಾವುಗಳ ಹರಿದಾಟ ; ಅಬ್ಬಾ..! ಭಾರತೀಯ ಸೇನೆಯ ತರಬೇತಿ ಅದೆಷ್ಟು ಕಠಿಣ..?

ನವದೆಹಲಿ : ಹಗಲು ರಾತ್ರಿಯೆನ್ನದೇ, ಮಳೆ ಚಳಿ ಪ್ರವಾಹ ಲೆಕ್ಕಿಸದೇ ನಮ್ಮನ್ನು ಕಾಪಾಡುವ ಭಾರತೀಯ ಯೋಧರ ಶಕ್ತಿ, ತ್ಯಾಗ ಯಾವುದಕ್ಕೂ ಮಿಗಿಲಾದುದಲ್ಲ.

ಹಲವರಿಗೆ ನಾನು ಕೂಡ ಯೋಧನಾಗಬೇಕು, ದೇಶದ ಸೇವೆ ಮಾಡಬೇಕೆಂದು ಕನಸಿರುತ್ತದೆ. ಆದರೆ ಅಲ್ಲಿ ನೀಡುವ ತರಬೇತಿ ಹೇಗಿರುತ್ತದೆ..? ಎಷ್ಟು ಶ್ರಮ ಪಡಬೇಕು ಎಂಬುದು ಗೊತ್ತಿರುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿದ್ದು, ಭಾರಿ ಟ್ರೆಂಡಿಂಗ್ ನಲ್ಲಿದೆ.

ಭಾರತೀಯ ಸೇನೆಯ ಧೈರ್ಯ ಮತ್ತು ಶೌರ್ಯದ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ. ನಮ್ಮ ಸೈನ್ಯವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಸೈನ್ಯದ ಶಿಸ್ತು ಮತ್ತು ತರಬೇತಿಯಲ್ಲಿನ ಸವಾಲುಗಳು, ಇದು ಅವರನ್ನು ಇತರ ದೇಶಗಳ ಸೈನಿಕರಿಗಿಂತ ಉತ್ತಮಗೊಳಿಸುತ್ತದೆ. ಭಾರತೀಯ ಸೇನೆಯ ಯೋಧರಿಗೆ ತರಬೇತಿ ನೀಡುವಾಗ ಅವರ ಮೈ ಮೇಲೆ ಹಾವುಗಳನ್ನು ಹರಿಬಿಡುತ್ತಾರೆ. ಆದರೆ ಈ ಹಾವುಗಳು ಅವರಿಗೆ ಯಾವುದೇ ಹಾನಿ ಮಾಡಲ್ಲ. ಈ ಮೂಲಕ ಸೈನಿಕರ ತಾಳ್ಮೆ, ಧೈರ್ಯವನ್ನು ಪರೀಕ್ಷಿಸಲಾಗುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಎಕ್ಸ್ ಬಳಕೆದಾರರ ಪ್ರಕಾರ, ಈ ವೀಡಿಯೊ ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಿಂದ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular